Showing posts with label ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ purandara vittala ALLI NODALU RAAMA ILLI NODALU RAAMA. Show all posts
Showing posts with label ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ purandara vittala ALLI NODALU RAAMA ILLI NODALU RAAMA. Show all posts

Wednesday, 15 December 2021

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ purandara vittala ALLI NODALU RAAMA ILLI NODALU RAAMA






 ರಾಗ ಶಿವಂಜಿನಿ   ಆದಿತಾಳ 
3rd Audio by Mrs. Nandini Sripad




ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ॥ ಪ ॥
ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮ ॥ ಅ ಪ ॥

ರಾವಣನ ಮೂಲಬಲ ಕಂಡು ಕಪಿಸೇನೆ ।
ಆವಾಗಲೇ ಬೆದರಿ ಓಡಿದವು ॥
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ ॥ 1 ॥

ಅವನಿಗೆ ಇವ ರಾಮ ಇವನಿಗೆ ಅವ ರಾಮ ।
ಅವನಿಯೊಳೀಪರಿ ರೂಪವುಂಟೆ ॥
ಲವಮಾತ್ರದಿ ಅಸುರ ದುರುಳರೆಲ್ಲರು ।
ಅವರವರ್ ಹೊಡೆದಾಡಿ ಹತರಾಗಿ ಪೋದರು ॥ 2 ॥

ಹನುಮದಾದಿ ಸಾಧು ಜನರು ಅಪ್ಪಿಕೊಂಡು ।
ಕುಣಿಕುಣಿದಾಡಿದರು ಹರುಷದಿಂದ ॥
ಕ್ಷಣದಲ್ಲಿ ಪುರಂದರವಿಠ್ಠಲರಾಯನು ।
ಕೊನೆಗೊಡೆಯನು ತಾನೊಬ್ಬನಾಗಿ ನಿಂತ ॥ 3 ॥
****

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ

ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||
ರಾವಣನ ಮೂಲಬಲ ಕಂಡು ಕಪಿಸೇನೆ

ಆವಾಗಲೆ ಬೆದರಿ ಓಡಿದವು

ಈ ವೇಳೆ ನರನಾಗಿ ಇರಬಾರದೆಂದೆಣಿಸಿ

ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||
ಅವನಿಗೆ ಇವ ರಾಮ ಇವನಿಗೆ ಅವ ರಾಮ

ಅವನಿಯೊಳ್ ಈಪರಿ ರೂಪವುಂಟೆ

ಲವಮಾತ್ರದಿ ಅಸುರ ದುರುಳರೆಲ್ಲರು

ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||
ಹನುಮದಾದಿ ಸಾಧುಜನರು ಅಪ್ಪಿಕೊಂಡು

ಕುಣಿಕುಣಿದಾಡಿದರು ಹರುಷದಿಂದ

ಕ್ಷಣದಲಿ ಪುರಂದರ ವಿಠಲರಾಯನು

ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||
***


alli nODalu rAma illi nODalu rAma
ellelli nODidara alli SrIrAma || pa ||

rAvaNana mUlabala kaMDu kapisEne
AvAgale bedari ODidavu
I vELe naranAgi irabAradeMdeNisi
dEva rAmacaMdra jagavella tAnAda || 1 ||

avanige iva rAma ivanige ava rAma
avaniyoL Ipari rUpavuMTe
lavamAtradi asura duruLarellaru
avaravar hoDedADi hatarAgi pOdaru || 2 ||

hanumadAdi sAdhujanaru appikoMDu
kuNikuNidADidaru haruShadiMda
kShaNadali puraMdara viThalarAyanu
konegoDeyanu tAnobbanAgi niMta || 3 ||
***


ರಾಗ : ನಾಟ ಕುರಂಜಿ  ತಾಳ : ಆದಿ (raga, taala may differ in audio)
Khamas - Rupaka

Alli nodalu rama illi nodalu rama ellalli nodidaralli shri rama

Ravana moolabala kandu kapisene avagale bedari odidavu
I vele naranagi irabaradendenisi deva ramacandra jagavella tanada||1||

Avanige iva rama ivanige ava rama avaniyoli pari rupavunte
Lavamatradi asura durullellaru avaravar hodedadi hataragi podaru||2||

Hanumadadi sadhu janaru appikondu kunikunidadidaru harusadinda
Ksanadalli purandara vittalarayanu konekodeyanu tanoppanagi ninta||3||
***



P: alli nODalu rAma illi nODalu rAma ellalli nODidaralli shri rama

C1: rAvaNa mUlabala kaNDu kapisEne AvAgale bedari Odidavu
I vELe naranAgi irabAradendenisi dEva rAmacandra jagavella tAnAda

2: avanige iva rAma ivanige ava rAma avaniyoLI pari rUpavuNTE
lavamAtradi asura dUruLlellaru avaravar hoDedADi hatarAgi pOdaru

3: hanumadAdi sAdhu janaru appikoNDu kuNikuNiDadidaru haruSadinda
kSaNadalli purandara viTTalarAyanu konekoDeyanu tAnoppanAgi ninta
***

Meaning: Rama here, rama there, shri rama everywhere

C1: The mighty forces of  Ravana started running away the moment they saw the monkey army.

C2: This person is rama for that person, that person is rama for this person; is there any such a strange phenomenon in this world?

C3: Noble persons like Hanuma embraced each other and danced; purandaravithala appeared there that moment.
***


ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲ ತಾನಾದ||೧||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರುಪ ಉಂಟೆ
ಲವ ಮಾತ್ರದಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿ ಹೋದರು ||೨||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ||೩||
****

ಇಲ್ಲಿ ನೋಡಲು ರಾಮ purandara vittala
ಪುರಂದರದಾಸರು
ಇಲ್ಲಿ ನೋಡಲು ರಾಮ ಅಲ್ಲಿ ನೋಡಲು ರಾಮ |
ಎಲ್ಲೆಲ್ಲಿ ನೋಡಲು ರಾಯಚಂದ್ರನು ಪ

ಮೂಲೋಕದಲ್ಲಿ ತ್ರೈಮೂರ್ತಿರೂಪಗಳಲ್ಲಿಎಲ್ಲೆಲ್ಲಿ ನೋಡಲು ಅಲ್ಲಲ್ಲಿ ರಾಮರೂಪ ಅ.ಪ

ರಾವಣನ ಮೂಲಬಲವ ಕಂಡು ಕಪಿಗಳು ಆವಾಗಲೆ ಹೊರಟೋಡುತಿರೆ ಈವಾಗ ನರನಾಗಿ ಇರಬಾರದೆಂದೆನುತದೇವ ರಾಮಚಂದ್ರ ಬಹುರೂಪ ತಾನಾದ 1

ಅವನಿಗೆ ಇವ ರಾಮ ಇವನಿಗೆ ಅವ ರಾಮಬುವಿಯೊಳಗೆ ಬೇರೆ ರೂಪವುಂಟೆ ಅವನಿಯೊಳಿರುತಿಪ್ಪದುರುಳ ಜನರೆಲ್ಲಅವರವರೆ ಹೊಡೆದಾಡಿ ಹತವಾಗಿ ಹೋದರು 2


ಹನುಮಂತಾದಿ ಸಾಧುಜನರು ಅಪ್ಪಿಕೊಂಡುಕುಣಿದಾಡಿದರು ಅತಿ ಹರುಷದಲಿ ಕ್ಷಣದಲಿ ಪುರಂದರವಿಠಲ ರಾಯನು ಕೊನೆಗೆ ರಾಮಚಂದ್ರನೊಬ್ಬನಾಗಿ ನಿಂತ 3
****

rendered by
shrI Ananda rAo, srIrangam
to aid learning the dAsara pada for beginners

alli nODalu rAma illi nODalu rAma |
ellalli nODidaralli rAma ||

rAvaNana mUlabala kanDu kapisEne
AvAgale bedari ODidavu
I vELe naranAgi irabAra dendenisi
dEva rAmacandra jagavella tAnAda || alli nODalu rAma ... ||

avanige iva rAma ivanige ava rAma
avaniyOLIpari rUpavunTe
lavamAtradi asura duruLarellaru
avaravar hoDadADi hatarAgi pOdaru || alli nODalu rAma ... ||

hanumadAdi sAdhu janaru appikonNDu
kuNi kuNidADidaru haruShadinda
kShaNadalli purandara viTThala rAyanu
kone goDeyanutA nobbanAgi ninta || alli nODalu rAma ... ||
***