ಕಾಯಬೇಕೆನ್ನ ಶ್ರೀ ದೇವಾದಿ ದೇವಿಣಿ
ದಯವುಳ್ಳ ಸ್ವಾಮಿ ಸಹಕಾರಿ ನಾರಾಯಣಿ ||ಪ||
ಕರುಣಾನಂದ ಗುಣಿ ಶರಣ ಸಂರಕ್ಷಣೀ
ದಾರಿದ್ರ್ಯಭಂಜನಿ ದುರಿತವಿಧ್ವಂಸಿನೀ ||೧||
ಘನಸುಖದಾಯಿನೀ ದೀನ ಉದ್ಧಾರಿಣೀ
ಮುನಿಜನ ಶಿಖಾಮಣಿ ನೀನೇ ಶ್ರೀಲಕ್ಷುಮಿಣಿ ||೨||
ಬಾಹ್ಯಾಂತ್ರ ವ್ಯಾಪಿಣೀ ಮಹಾಗುರು ರೂಪಿಣೀ
ಸಾಹ್ಯದಲಿ ನೀ ಪೂರ್ಣಿ ಮಹಿಪತಿಯ ಸ್ವಾಮಿನಿ ||೩||
****
ಭೈರವಿ ರಾಗ ತಾಳ- ತ್ರಿತಾಳ (raga, taala may differ in audio)
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯಬೇಕೆನ್ನ ಶ್ರೀ ದೇವಾಧಿದೇವಿಣಿ ದಯವುಳ್ಳಸ್ವಾಮಿ ಸಹಕಾರಿ ನಾರಾಯಣಿ ಪ
ಕರುಣಾನಂದಗುಣ ಶರಣ ಸಂರಕ್ಷಣಿ ದುರಿತ ವಿಧ್ವಂಸಿನಿ 1
ಘನಸುಖದಾಯಿಣಿ ದೀನ ಉದ್ಧಾರಣಿ ಶಿಖಾಮಣಿ ನೀನೆ ಶ್ರೀ ಲಕ್ಷುಮಿಣಿ 2
ಬಾಹ್ಯಂತ್ರ ವ್ಯಾಪಿಣಿ ಮಹಾಗುರು ಸ್ವರೂಪಿಣಿ ಸಾಹ್ಯದಲಿ ನೀ ಪೂರ್ಣ ಮಹಿಪತಿಯ ಸ್ವಾಮಿಣಿ 3
***