Showing posts with label ಆಪೋಶನವ ಹಾಕೆ ವೈಯ್ಯಾರಿ ಲೋಕ ಸುಂದರಿ ankita bheemesha krishna AAPOSHANAVA HAAKE VAYYAARI LOKA SUNDARI. Show all posts
Showing posts with label ಆಪೋಶನವ ಹಾಕೆ ವೈಯ್ಯಾರಿ ಲೋಕ ಸುಂದರಿ ankita bheemesha krishna AAPOSHANAVA HAAKE VAYYAARI LOKA SUNDARI. Show all posts

Wednesday, 1 December 2021

ಆಪೋಶನವ ಹಾಕೆ ವೈಯ್ಯಾರಿ ಲೋಕ ಸುಂದರಿ ankita bheemesha krishna AAPOSHANAVA HAAKE VAYYAARI LOKA SUNDARI





ಆಪೋಶನವ ಹಾಕೆ ಒ(ವೈ?) ಯ್ಯಾರಿ ಲೋಕಸುಂದರಿ

ಶ್ರೀಪತಿಯ ಕರದಲ್ಲಿ ಘೃತಧಾರೆ ಲೋ-

ಕಪಿತನಾಗಿದ್ದ ಕಂಸಾರಿ ಕೈಯಲ್ಲಿ ತ್ರಿಧಾರೆ ಪ


ಕೊಳಲನೂದುತಾಕಳನೆ ಕಾಯುತ್ತ ದಧಿಚೋರನಾಗಿ

ಕಳಲಗಡಿಗೆಯನೊಡೆದು ಪೋಗುತ್ತ

ಸೆಳೆದು ಗೋಪೇರ ಸೀರೆಗಳ ಮರಕೆ ಕಟ್ಟಿದ್ದ ಕರಕೆ 1


ವಾರಿಜಾಕ್ಷಗೆ ಒಲಿದು ನಲಿಯುತ್ತ ವರ ಮೋಹನಾಂಗಿ

ಸಾರಸಮುಖಿ ಸರಸವಾಡುತ್ತ

ಮಾರಜನಕನ ಮನವ ಮೋಹಿಸುತ ಮುಖನೋಡಿ ನಗುತ2


ನಂದನಂದನ ನರನ ಸಾರಥಿಯೊ ಭೀಮೇಶಕೃಷ್ಣ

ಕೊಂಡಾಪೋಶನ ಕುಳಿತ ಸತಿಜೊತೆಗೆ

ಚೆಂದದಿಂದಲಿ ಬೆಳಗಲಾರತಿಯ ಪಾಡಿ ಕೀರುತಿಯ 3

****

 ..

ಆಪೋಶನವ ಹಾಕೆ ಒಯ್ಯಾರಿ ಲೋಕಸುಂದರಿ

ಶ್ರೀಪತಿಯ ಕರದಲ್ಲಿ ಘೃತಧಾರೆ ಲೋ-

ಕಪಿತನಾಗಿದ್ದ ಕಂಸಾರಿ ಕೈಯಲ್ಲಿ ತ್ರಿಧಾರೆ ಪ


ಕೊಳಲನೂದುತಾಕಳನೆ ಕಾಯುತ್ತ ದಧಿಚೋರನಾಗಿ

ಕಳಲಗಡಿಗೆಯನೊಡೆದು ಪೋಗುತ್ತ

ಸೆಳೆದು ಗೋಪೇರ ಸೀರೆಗಳ ಮರಕೆ ಕಟ್ಟಿದ್ದ ಕರಕೆ 1


ವಾರಿಜಾಕ್ಷಗೆ ಒಲಿದು ನಲಿಯುತ್ತ ವರ ಮೋಹನಾಂಗಿ

ಸಾರಸಮುಖಿ ಸರಸವಾಡುತ್ತ

ಮಾರಜನಕನ ಮನವ ಮೋಹಿಸುತ ಮುಖನೋಡಿ ನಗುತ2


ನಂದನಂದನ ನರನ ಸಾರಥಿಯೊ ಭೀಮೇಶಕೃಷ್ಣ

ಕೊಂಡಾಪೋಶನ ಕುಳಿತ ಸತಿಜೊತೆಗೆ

ಚೆಂದದಿಂದಲಿ ಬೆಳಗಲಾರತಿಯ ಪಾಡಿ ಕೀರುತಿಯ 3

***