Showing posts with label ವನಜನಾಭನ ಧಾಳಿ ಘನವಾಯಿತಿಂದಿಲಿಂದ pranesha vittala. Show all posts
Showing posts with label ವನಜನಾಭನ ಧಾಳಿ ಘನವಾಯಿತಿಂದಿಲಿಂದ pranesha vittala. Show all posts

Saturday, 16 November 2019

ವನಜನಾಭನ ಧಾಳಿ ಘನವಾಯಿತಿಂದಿಲಿಂದ ankita pranesha vittala

by ಪ್ರಾಣೇಶದಾಸರು
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪ

ಚಿನ್ನನ ಸುದ್ದಿನಿತ್ಯಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||ಅನ್ಯಾಯದ ಮಾತುಹುಸಿಹುಟ್ಟಿಸಿಯಾಡಿದರೆ ನಮ್ಮ |ಸಣ್ಣವರಾಣೆ ಗೋಪೆಮ್ಮ 1

ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ2

ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ 3

ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ 4

ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ 5

ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ6

ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||ಮೂಲೇಶ ಹುಡುಗನ ಕೈಯಕಟ್ಟಿಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ 7

ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ 8

ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ 9

ಗಂಡಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ 10

ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ 11
********