ನನಗಾವ ಬಲವಿಲ್ಲ ನಿರುಪಮನೆ ಹೇಳೈಯ
ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ
ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ
ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ
ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ
ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ
ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ
ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ 1
ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ
ತನುಜ ಕರಣಗಳಿನ್ನು ಶತ್ರುಗಳ ಸಮವಿಹವು
ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ
ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ 2
ನರರಿಗಾಶ್ರಯ ಸುರರು ಸುರರಿಗಾಶ್ರಯ
ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು
ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ
ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ 3
ದೇವ ದೇವರ ದೇವ ದೇವತ್ವ ನೀಡುವನೆ
ಕಾವ ಜೀವರ ನಿಚಯ ಸಾರ್ವಭೌಮನು ನೀನು
ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ
ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ 4
ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ
ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ
ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ
ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ 5
****