..
ಇಂದು ನೋಡಿದೆ ನಂದದಾಯಕ ಇಂದಿರಾರಮಣನಾ ಪ
ಇಂದು ಮೌಲ್ಯಮರೇಂದ್ರ ವಂದಿತಪಾದನಾ ಅ.ಪ ವಾರಿಚರ, ಗಿರಿಧಾರಿ, ಸೂಕರ ಕ್ರೂರರೂಪವತಾಳ್ದನಾ ಪೋರ, ಜನನಿಶಿರಹಾರಿ, ವನಚರ, ನಾರಿಜನರಿಗೆ ಒಲಿದನಾ 1
ನಾರಿವ್ರತ ಪರಿಹಾರ ಮಾಡಿ ಹಯವನೇರಿ ಮೆರೆದನಾ ಧಾರುಣಿಯೊಳು ಸಮೀರಗಿರಿವಾಸ ವೀರಪುರದೊಳು ತೋರೊನಾ 2
ವೀತಶೋಕ ವಿಧಾತಜನಕನ ದೂತಜನ ಪರಿಪಾಲನಾ ಖ್ಯಾತಮಹಿಮನ ದಾತಗುರುಜಗ ನ್ನಾಥವಿಠಲ ರಾಯನಾ 3
***