Showing posts with label ಸತ್ಯಭೋಧ ಯತಿಕುಲ jagannatha vittala satyabodha teertha stutih. Show all posts
Showing posts with label ಸತ್ಯಭೋಧ ಯತಿಕುಲ jagannatha vittala satyabodha teertha stutih. Show all posts

Friday, 27 December 2019

ಸತ್ಯಭೋಧ ಯತಿಕುಲ ankita jagannatha vittala satyabodha teertha stutih

ಜಗನ್ನಾಥದಾಸರು
ಸತ್ಯಭೋಧ ಯತಿಕುಲವರನೆ ನಿತ್ಯ
ತುತಿಸಿ ವಂದಿಸುವ ತಾವಕರೊಳು ಎಣಿಸೋ ಪ

ಅರ್ಥಿಜನ ಚಿಂತಾಮಣಿ ಸತ್ಕರುಣಿ
ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ
ಖ್ಯಾನ ಪೇಳುವ ಕಾಲದಿ
ಶ್ವಾನರೂಪದಿ ಪವಮಾನ ಜನರು ನೋಡೆ
ಕಾಣಿಸಿಕೊಂಡನಂದೊ ತಾ ಬಂದು 1

ಬವರಗೋಸುಗ ಬಂದ ಯವನಾಧಿಪತಿ ನಿಮ್ಮ
ಸುವಿಚಿತ್ರ ಮಹಿಮೆ ಕಂಡು
ಪ್ರವಿನೀತನಾಗಿ ಕಪ್ಪವೆ ಕೊಟ್ಟು ನಮಿಸಿದ
ಕವಿ ಆವಾ ವಿಭವಾ ವರ್ಣಿಸುವಾ 2

ಇವರು ದೇವಾಂಶರೆಂದರುಪುವಗೋಸುಗ ಬಂದು
ದಿವಿಜತರಂಗಿಣಿಯು
ಶಿವನಂಗಭೂರುಹ ಮೂಲ ಭಾಗದಲಿ ಉ
ದ್ಭವಿಸಿ ಕಂಗೊಳಿಸಿದಳು ಕೃಪಾಳು 3

ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ
ವಂತನಂಘ್ರಿ ಕಮಲ
ಸಂತತ ಸರ್ವತ್ರ ಚಿಂತಿಸುತಿಪ್ಪ ಮ
ಹಾಂತರಿಗೇನಚ್ಚರೀ ವಿಚಾರ 4

ಚಾರು ಚರಿತ ಭೂ
ಸುರವರ ಸನ್ನುತನೇ
ಪರಮ ಪುರುಷ ಜಗನ್ನಾಥ ವಿಠ್ಠಲ ನಿಮ್ಮ
ಪರಿಪರಿ ಮಹಿಮೆ ಎಲ್ಲಾ ತಾ ಬಲ್ಲಾ 5
*******