Showing posts with label ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ shree krishna. Show all posts
Showing posts with label ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ shree krishna. Show all posts

Wednesday, 1 September 2021

ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ankita shree krishna

..

ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವಭಾವಗೆ ದೇವರ ದೇವಗೆನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬ್ಜನಾಗಿಹೆÉಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನುನಿರ್ಜಿಸಲು ಬಂದ ವಾಮನಗೆ ನಿಸ್ಸೀಮನಿಗೆ ಪೂರ್ಣ ಕಾಮನಿಗೆ 1


ನಳಿನನಾಭನೆಂದು ತಿಳಿದು ಬೇಗನೆ ಬಲಿಕೆಳದಿಯ ಕರೆದುದಕವತರಿಸಿಚಲುವ ಪಾದವ ತೊಳೆದಿಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ ಬಹು ತಳೆದವಗೆ-ಭೂಮಿಯಳೆದವಗೆ 2


ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿನ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸತಿ ನಾಚಿಕೆಯಿಂದ ತನ್ನಳೆದುಕೋ ಎನ್ನತಲೆಯ ಮೆಟ್ಟಿದ ಬಹು ವಿಕ್ರಮಗೆ ಪರಾಕ್ರಮಗೆ ತ್ರಿವಿಕ್ರಮಗೆ3

***