..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಶ್ರೀ ವರಾಹ ನರಹರಿ ಧನ್ವಂತರಿ
ಶರಣು ಶರಣು ಶರಣು ಭೂವರಾಹ ಮೂರುತಿ
ಶರಣು ಶರಣು ಧನ್ವಂತರಿ
ಶರಣು ಭಾರತೀರಮಣವಂದ್ಯನೆ ಶರಣು ನೃಹರೆ ಕೃಪಾನಿಧೆ ಪ
ವಾರಿಧಿಯಿಂದ ಕ್ರೂರ ಅಸುರನ
ಮುರಿದು ಧರೆಯನುದ್ಧರಿಸಿದೆ
ಘೋರ ವ್ಯಾಧಿಸಮುದ್ರದಿಂದು -
ದ್ಧರಿಸೊ ಎನ್ನ ಕೃಪಾನಿಧೆ 1
ಸುರರ ಪೊರೆಯಲು ಅಮೃತ ತಂದೆ
ಪರಮ ಪೂರುಷ ಭೇಷಜ
ಶಿರ ಉರಾದಿ ಸರ್ವ ಅಂಗದಿ
ಸುರಿದು ಅಮೃತವ ಪೊರೆ ಎನ್ನ 2
ಮೃತ್ಯು ಮೃತ್ಯುವೆ ದಯದಿ ಎನ್ನಪ -
ಮೃತ್ಯು ತರಿದು ಪಾಲಿಸೊ
ನಿತ್ಯ ಸುಖಮಯ ವಿಧಿಯ ತಾತ
ಪ್ರಸನ್ನ ಶ್ರೀನಿವಾಸನೆ 3
***