Showing posts with label ಬಾರೋ ಬಾರೋ ರಂಗಯ್ಯಾ ಅಂದುಗೆ ಗೆಜ್ಜೆ gurumahipati. Show all posts
Showing posts with label ಬಾರೋ ಬಾರೋ ರಂಗಯ್ಯಾ ಅಂದುಗೆ ಗೆಜ್ಜೆ gurumahipati. Show all posts

Wednesday, 1 September 2021

ಬಾರೋ ಬಾರೋ ರಂಗಯ್ಯಾ ಅಂದುಗೆ ಗೆಜ್ಜೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ 


ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1 

ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2 

ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3 

ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4 

ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5

***