ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೋ ಬಾರೋ ರಂಗಯ್ಯಾ | ಅಂದುಗೆ ಗೆಜ್ಜೆ | ಝಣ ಝಣ ಝಣ ಝಣ ರವದಿಂದಾ ಪ
ಕಡೆಗಣ್ಣು ಹೊಳವನು | ಅಡಿಗಡಿಗೆ ದೋರುತಾ | ಎಡಬಲದೋಳಿಂದೊಲಿದು | ದುಡುದುಡು ದುಡು ನಲಿಯುತಾ 1
ಪದಹತಿಗೆ ಮಯೂರಾ | ವದನ ತಗ್ಗಿಸುವಂತೆ | ಮುದದಿ ಗೆಳೆಯರವೆರಸಿ | ಒದಗಿ ಧಿಗಿಧಿಗಿ ಧಿಗಿಲೆನುತಾ 2
ಅಂದು ಉದಯದಲೆದ್ದು | ಬಂದು ಬೆಣ್ಣೆಯ ಬೇಡೆ | ಕಂದಾ ನೀ ಕುಣಿಯೆನಲು | ನಿಂದು ತೋರಿದ ಭಾವದಿಂದ 3
ಬಿರಮುಗುಳ ನಗುತಾ | ಪೆರೆ ನೊಸಲೊಳು ಮೆರೆವಾ | ಕರ್ಣ ಕುಂಡಲಾ | ಭರದಿಂದಾ ಒಲಿಯುತಾ 4
ಗುರು ಮಹಿಪತಿ ಸ್ವಾಮಿ | ಹಾರೈಸುವಾ ನಯನಕ | ಹರುಷದಿ ತೃಪ್ತಿಗೈವಾ | ಕರುಣಾ ಸಾಕಾರದಿಂದಾ5
***
No comments:
Post a Comment