Showing posts with label ಅಂಬುಜದಳಾಕ್ಷಗೆ ಮಂಗಳ ಸರ್ವ neleyadikeshava. Show all posts
Showing posts with label ಅಂಬುಜದಳಾಕ್ಷಗೆ ಮಂಗಳ ಸರ್ವ neleyadikeshava. Show all posts

Tuesday, 15 October 2019

ಅಂಬುಜದಳಾಕ್ಷಗೆ ಮಂಗಳ ಸರ್ವ ankita neleyadikeshava

ರಾಗ ಪೂರ್ವಿ ಏಕತಾಳ

ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ
ಅಂಬುಜದಳಾಕ್ಷಗೆ ಮಂಗಳ ||ಪ||

ಜಲಧಿಯೊಳಾಮೆಯ ತಂದಗೆ ಮಂಗಳ
ಕುಲಗಿರಿಯನು ತಾಳ್ದವಗೆ ಮಂಗಳ
ನೆಲನ ಕದ್ದಸುರನ ಗೆಲಿದವಗೆ ಮಂಗಳ
ಸುಲಭ ನರಸಿಂಹಗೆ ಶುಭಮಂಗಳ ||೧||

ವಸುಧೆಯ ಈರಡಿಗೈದಗೆ ಮಂಗಳ
ವಸುಕುಲವನ್ನು ಅಳಿದಗೆ ಮಂಗಳ
ದಶಕಂಧರನ್ನು ಗೆಲಿದಗೆ ಮಂಗಳ
ಪಶುವ ಕಾಯ್ದವನಿಗೆ ಶುಭಮಂಗಳ ||೨||

ಪುರತ್ರಯ ವಧುಗಳ ಗೆಲಿದಗೆ ಮಂಗಳ
ತುರಗವಾಹನನಿಂಗೆ ಮಂಗಳ
ವರನೆಲೆಯಾದಿಕೇಶವನಿಗೆ ಮಂಗಳ
ಸುಲಭ ಸಿರಿಹರಿಗೀಗ ಶುಭಮಂಗಳ ||೩||
*******