..
kruti by ವೀರನಾರಾಯಣ Veeranarayana
ಏಕೆ ಬೇಕಾಗಿತ್ತೊ ನಿನಗೆ ಈ ಆಟಲೋಕೇಶ
ಸಾಕಯ್ಯ ಇಲಿ ಬೆಕ್ಕಿನಾಟಾ ಪ
ಸುಷ್ಟು ಜಲಧಿಶಯನ ಬಿಸುಟಿ ಬಿಸಲ್ಯಾಕೆಸೃಷ್ಟಿಪುದು ಮೊದಲ್ಯಾಕೆ ಸೃಷ್ಟಿಸಲು ಪ್ರಾಣಿಗಳಕಷ್ಟ ಪಡಿಸುವುದ್ಯಾಕೆ ಕಷ್ಟವನು ನೋಡಿತುಷ್ಟಪಡುವುದು ಯಾಕೆ ಇಷ್ಟಕೆ ಬಯಕೆ 1
ಸ್ವರ್ಗ ನರಕಗಳೇಕೆ ಜನ್ಮ ಜನ್ಮಾಂತರಕೆವರ್ಗ ಮಾಡುವುದೇಕೆ ಪಾಪಪುಣ್ಯಗಳೇಕೆದುರ್ಗಮದ ವೈಕುಂಠದಾಸೆ ತೋರುವುದೇಕೆನಿರ್ಗುಣನೆ ಸಲ್ಲದಿ ಉದ್ಯೋಗವ್ಯಾಕೆ 2
ಉದಧಿಶಯನದೊಳಾತ್ಮಾನಂದದಲಿ ಮುಳುಗಿಹೃದಯದೊಳು ನೀನೊಂದು ನೀನೇಯೇ ನೀನಾಗಿಮೋದ ಪಡುವುದು ಬಿಟ್ಟು ವೀರನಾರಾಯಣನೆಗದುಗಿನೊಳು ಬಂದಿಲ್ಲಿ ನಿಂತಿರುವುದೇಕೇ 3
***