Showing posts with label ಆರುತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ others. Show all posts
Showing posts with label ಆರುತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ others. Show all posts

Friday, 27 December 2019

ಆರುತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ others

by ದಾಸರ ಲಕ್ಷ್ಮೀನಾರಾಯಣರಾಯರು
ಆರತಿಯನು ಎತ್ತಿರಮ್ಮ  ವರ ಮಹಾಲಕ್ಷುಮಿಗೆ
ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ||ಪ||

ಶ್ರಾವಣ ಶುಕ್ರವಾರದಲಿ  ಸಾವಧಾನ ಮನದಿ ನಿತ್ಯ
ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ ||೧||

ಹೆತ್ತ ತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ
ಭೃತ್ಯವರ್ಗವನ್ನು  ಪೊರೆದು ನಿತ್ಯಲೋಕ ಮಾತೆಗೀಗ ||೨||

ಚಿಂತಿತಾರ್ಥವನೀವ ಲಕ್ಷ್ಮೀಕಾಂತನುರಸ್ಥಳದಿ ನಿಂತು
ದಂತಿವರದನನಂತ ಗುಣಗಳನಂತಗಾಣದಿರುವಳಿಗೆ ||೩||
*******