..
ಶಾರದೆ ನಿನ್ನ ಪಾದವ ಆರಾಧಿಸುವೆವುವಾರಿಜ ಭವಕ್ಕೆ ಸೇರಿಸು ಹರಸು ಪ.
ಸ್ವಚ್ಚ ಮನದಿ ನಿನ್ನ ನಿತ್ಯ ಭಜಿಸುವೆವುಸಚ್ಚಿದಾನಂದನ ಚಿತ್ತದಿ ನಿಲ್ಲಿಸ1
ರಂಭೆ ನಮ್ಮಯ ಹೃದಯ ಅಂಬರದೊಳು ನಿಂತುಅಂಬುಜನಾಭನ ತುಂಬಿಸು ಮನದಿ2
ಅರಿಷಿಣ ಕುಂಕುಮ ಬೆರೆಸಿದ ಪರಿಮಳಸರಸದಿ ಕೈ ಕೊಂಡು ಅರಸಿಯರ ಗೆಲಿಸ 3
ಅತ್ತಿ ಹೂವಿನಸೀರೆ ಮುತ್ತಿನಾಭರಣವಅರ್ಥಿಲೆ ಕೈ ಕೊಂಡು ಮಿತ್ರೆಯರ ಗೆಲಿಸ4
ರುಕ್ಮಿಣಿ ಪತಿ ಸೌಭಾಗ್ಯವ ರಚಿಸಲುಶೀಘ್ರದಿ ತೋರಿಸೆ ಕುಗ್ಗದೆ ನಮಗೆ 5
ಸತ್ಯಭಾಮಾ ಪತಿ ನಿತ್ಯ ರಾಮೇಶನ ತತ್ವವ ರಚಿಸುವೆ ಸತ್ಯವ ನುಡಿಸೆ ಶಾರದಾದೇವಿ6
****