Showing posts with label ಶ್ರೀಮಾಧವ ದಾಮೋದರ tulasi. Show all posts
Showing posts with label ಶ್ರೀಮಾಧವ ದಾಮೋದರ tulasi. Show all posts

Friday, 27 December 2019

ಶ್ರೀಮಾಧವ ದಾಮೋದರ ankita tulasi

by ತುಳಸೀರಾಮದಾಸರು
ಶ್ರೀ ಮಾಧವ ದಾಮೋದರ ನಾಮಾರ್ಚಿತಕಾಮಾಸೋಮಾನನದಾಮಾ ರಿಪುಭೀಮಾ ಎಚ್ಚರಿಕೆ ಪ

ಬೃಂದಾರಕಬೃಂದಾರ್ಚಿತ ವಂದಿತ ಮುಚುಕುಂದಸುಂದರ ರಥ ವಂದಿತ ನವಕುಂದಾ ಎಚ್ಚರಿಕೆ 1

ಗಂಗಾಪದರಂಗೇಶ ಭುಜಂಗಾರಿತುರಂಗಶೃಂಗಾರ ಶುಭಾಂಗ ಭವಭಂಗ ಎಚ್ಚರಿಕೆ 2

ಮಾರಾರಿಸಮಾಧಿತವಾರಾಸಿಗಭೀರಸೂರ ಸುಕುಮಾರಾ ರಣಧೀರಾ ಎಚ್ಚರಿಕೆ 3

ಶೇಷಾಚಲ ಭೂಷಾಹತದೋಷಾ ಮೃದುಭಾಷಾಭಾಷಾಪತಿಪೋಷಾ ದಶವೇಶಾ ಎಚ್ಚರಿಕೆ 4

ಶ್ರೀಮದಖಿಲಾಂಡಕೋಟಿ ಬ್ರಹ್ಮಾಂಡನಾಯಕಆದಿಮಧ್ಯಾಂತರಹಿತ ಘನಸಾರವಿಲಸನ್ಭ್ರೂಮಧ್ಯಕಸ್ತೂರಿ ತಿಲಕೋಜ್ವಲಾ ದಿವ್ಯ ಪೀತಾಂಬರಧಾರೀಶ್ರೀಯಲಮೇಲ್‍ಮಂಗಾ ಮನೋಹರಶ್ರೀಭಾರ್ಗವಾಸರ ಭಜನೋಲ್ಲಾಸಾಶ್ರೀಚಾಮರಾಟ್ಪಾಲಿತ ಸತ್ಸಂಪ್ರದಾಯ ಸುಜ್ಞಾನಬೋಧಿನೀ ಸಮಾಜೋದ್ಧಾರಕಾ ಎಚ್ಚರಿಕೆ 5
******