Showing posts with label ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು narasimha vittala. Show all posts
Showing posts with label ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು narasimha vittala. Show all posts

Friday, 27 December 2019

ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು ankita narasimha vittala

on ರಾಘವೇಂದ್ರ ಗುರುಗಳು
ಬಲ್ಲೀದ ಬೀದಿಯೊಳು ನಿಲ್ಲಾದೆ ಬರುವರು |
ಎಲ್ಲಿ ಜನರೆಲ್ಲನೋಡುವರು
ನೋಡುವರು ಗುರುಗಳನಾ | ಪ್ರಹ್ಲಾದನೆಂದು ಹೊಗಳುವರು 1

ಭೂಸುರರು ಬಂದು ವೇದ ಘೋಷಣೆಯ ಮಾಡುವರು |
ದಾಸಜನರೆಲ್ಲ ನೋಡುವರು
ನೋಡುವರುಗುರುಗಳನಾ | ವ್ಯಾಸ
ಮುನಿಯೆಂದು ಹೊಗಳುವರು 2

ಅಂಥವರೆ ಇಂಥವರೆ ಎಂಥವರೆ ಗುರುಗಳು |
ಮಂತ್ರಾಲಯದ ದೊರೆಗಳು
ದೊರೆಗಳು ಕೈಮುಗಿದ ಜನರಿಗೆ | ಚಿಂತೆಯನು
ಬಿಡಿಸಿ ಕಳುಹುವರು 3

ಮಂತ್ರಾಲಯಕ್ಕೆ ಹೋಗಿ | ನಿಂತು ಕೈಮುಗಿಯಲು |
ಎಂಥ ಕÀರುಣಾಳು
ಎಂಥ ಕರುಣಾಳು | ಕೈ ಮುಗಿದ ಜನರಿಗೆ |
ಸಂತಾನಕೊಟ್ಟುಸಲಹುವರು 4

ಬೃಂದಾವನ ದಲಿನಿಂದು ಮೆರೆಯುವರು |
ಬಂದ ಜನರನ್ನು ಪೊರೆಯುವರು
ಪೊರೆಯುವರು | ಜನರು ಶ್ರೀ ರಾಘವೇಂದ್ರ
ನೆಂತೆಂದು ಕರಿಯುವರು 5

ಯಾರಯ್ಯ ಗುರುಗಳು ತೇರಿನಲಿ ಕುಳಿತಿಹರು |
ತೋರಮುತ್ತಿನ ಹಾರವನು
ಮುತ್ತಿನ ಹಾರವನು | ಹಾಕಿದ್ದ ಉತ್ಸವ ಕಂಡು ರಾಯರಿಗೆ
ಕೈಯ ಮುಗಿವೇನು 6

ಸೃಷ್ಟಿಮೇಲಿನ ಜನರು | ಎಷ್ಟು ವರ್ಣಿಸಲಮ್ಮ |
ಮೃತ್ತಿಕಿ ಅಂಗಾರ ಧರಿಸುವರು
ಮಂತ್ರಾಕ್ಷತೆಯಿಂದ | ಕುಷ್ಟ ರೋಗಗಳನೆಲ್ಲ ಕಳೆಯುವರು 7

ತಂದೆ ರಾಘವೇಂದ್ರರ | ನಿಂದು ಸೇವಿಸಲಾಗ |
ವಂಧ್ಯುರಿಗೆ ಕಂದರಾಗುವರು
ಆಗುವರು ಗುರುಗಳು | ಜನರು ಆನಂಧದಿಂದ ಭಜಿಸುವರು 8

ಮಂತ್ರಾಲಯವು ಇನ್ನೆಂತು ವರ್ಣಿಸಲಮ್ಮ |
ಆನಂದಕ್ಕೆ ಅಳವಲ್ಲ
ಅಳವಲ್ಲ ಗುರುಗಳನ | ನಿಂತು ನೋಡುವರ ನೆಲೆಯಿಲ್ಲ 9
ಪ್ರಹ್ಲಾದವರದ ನಿಲ್ಲಾದೆನೆನೆಯುವನೆ |
ಎಲ್ಲದುರಿತಗಳ ಪರಿಹಾರ
ಪರಿಹರಿಸುವ ಲಕ್ಷ್ಮೀ ವಲ್ಲಭ | ನರಸಿಂಹ ವಿಠಲನ ನೆನೆವೇನೆ 10
********