Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಆಲನಾರಾಯಣಗೆ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭ ಮಂಗಳಂ ಆಲನಾರಾಯಣಗೆ purandara vittala. Show all posts

Friday 6 December 2019

ಜಯ ಮಂಗಳಂ ನಿತ್ಯ ಶುಭ ಮಂಗಳಂ ಆಲನಾರಾಯಣಗೆ purandara vittala

ರಾಗ ಭೈರವಿ ಛಾಪುತಾಳ

ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||

ಆಲನಾರಾಯಣಗೆ ಲಕ್ಷ್ಮೀಅರಸಗೆ
ಕ್ಷೀರಸಾಗರದಲ್ಲಿ ನೆಲಸಿಹನಿಗೆ
ಆಲದೆಲೆಯಲಿ ಮಲಗಿ ಲೋಲನಾಗಿದ್ದಂಥ
ಸಾಕ್ಷಾತು ಪತಿಯ ವೆಂಕಟರಮಣಗೆ ||

ಗೋಕುಲದಲಿ ಹುಟ್ಟಿದವಗೆ ಗೋವುಗಳ ಕಾಯ್ದವಗೆ
ಗೋಪಾಲ ಶ್ರೀಕೃಷ್ಣ ಎನಿಸಿಹಗೆ
ಹದಿನಾಲ್ಕು ಲೋಕ ಬಾಯಲಿ ತೋರಿದಾತಗೆ
ಸಾಕ್ಷಾತು ಪತಿಯ ವೆಂಕಟರಮಣಗೆ ||

ದಶರಥರಾಮನಿಗೆ ಅಸುರ ಸಂಹಾರಿಗೆ
ಹೆಸರು ಸೀತಾಪತಿ ಎನಿಸಿಹಗೆ
ಕುಶಲದಲಿ ಸೇತುವೆನು ಕಟ್ಟಿ ಮೆರೆದಾತನಿಗೆ
ಸಾಕ್ಷಾತು ಪತಿಯ ವೆಂಕಟರಮಣಗೆ ||

ಶುಕ್ರವಾರದ ಪೂಜೆ ಪುನುಗಾಭಿಷೇಕದಾ
ಸ್ವಾಮಿಪುಷ್ಕರಿಣಿಲಿ ಸ್ಬಾನವನೆ ಮಾಡಿ
ಚಂದದಲಿ ತೀರ್ಥಪ್ರಸಾದ ಕಾಣಿಕೆಯಿತ್ತು
ಸುತ್ತಲು ಗರುಡ ಕಂಭದ ಜ್ಯೋತಿಯ ||

ಗುತ್ತಿ ಗೊಂದಿಪುರ ಪುಟ್ಟಮಾಲಾದೇಶ
ಇಕ್ಕೇರಿ ಶೃಂಗೇರಿ ಉಭಯಪುರ
ಒಪ್ಪುವ ಚೋಳಮಂದಲ ಶ್ರೀಮಂಡಲ
ಉಚ್ಚಾಹ ಬಂದ ಶ್ರೀವೆಂಕಟರಮಣ ||

ವಿಜಯನಗರ ಪಿಲುಪಕ್ಷಿಯಾನೆಗೊಂದಿ
ಹರಿಹರ ವೈಲಾರ ಉಮಯಾಪುರ
*ಗಜಗ ಲಕ್ಷ್ಮೀಸರ ಹೊಸಭಾನು ಹೊಸಪೇಟೆ
ಉಡುಗರೆ ಬಂದ ವೆಂಕಟರಮಣಗೆ ||

ತೆಲುಗ ತಿಗಳ ಮಲೆಯಾಳ ಪಾಂಡವದೇಶ
**ಗವುಳಿ ಗಜ್ಜಾಳಿ ಕರ್ಣಾಟ ದೇಶ
ಉಡುಪಿ ಕಲ್ಲೂರು ಕೃಷ್ಣವೇಣಿ ಶ್ರೀರಂಗ
ಮುಡುಪುಗಳು ಬಂದ ವೆಂಕಟರಮಣಗೆ ||

ತೊಟ್ಟಿಚಕ್ರದ ಕಪಿಲತೀರ್ಥಸ್ನಾನವ ಮಾಡಿ
ಪಾಪವಿನಾಶಿನಿಯಲ್ಲಿ ಪಾಪವನೆ ಕಳೆದು
ಕೋಟಿದೇವಿಗೆ ಕೋಟಿಪುಷ್ಪಗಳ ಸಮರ್ಪಿಸಿ
ಸಹಸ್ರ ನೈವೇದ್ಯ ವೆಂಕಟರಮಣಗೆ ||

ಕೊಟ್ಟರೆ ವರಗಳನು ತಪ್ಪಿಲ್ಲವೆನುತಲೆ
ಬೆಟ್ಟದ ಮೇಲೆ ತಾ ನೆಲಸಿಹಗೆ
ಥಟ್ಟನೆ ತಿರುಪತಿ ಮೇಲೆ ನೆಲಸಿದ
ಬೆಟ್ಟದ ಒಡೆಯ ಪುರಂದರವಿಠಲಗೆ ||

* ಗಜಗ = ಗದಗ , ಲಕ್ಷ್ಮೀಸರ= ಲಕ್ಷ್ಮೇಶ್ವರ 
** ಗವುಳಿ= ಗೌಡ ದೇಶ
*********