..
kruti by Nidaguruki Jeevubai
ಮುತ್ತೈದೆ ಜಯ ಜಯ
ಮುತ್ತೈದೆ ಜಯ ಜಯ
ಮುತ್ತೈದೆಯರು ಪಾಡುತ ಜಯ ಜಯ
ಮುತ್ತಿನಾರತಿ ಎತ್ತುತಾ ಪ
ಪೃಥ್ವಿಗೊಡೆಯ ಪುರುಷೋತ್ತಮ ಹರಿಗೀಗ
ಮುತ್ತಿನಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ 1
ಮಿತ್ರೆ ರುಕ್ಮಿಣಿ ಸತ್ಯಭಾಮೆಯರರಸಗೆ
ರತ್ನದಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ 2
ಮಮತೆಯಿಂದಲಿ ಕಮಲನಾಭ ವಿಠ್ಠಲನಿಗೆ
ಕನಕದಾರತಿ ಎತ್ತುತಾ ಜಯ ಜಯ
ಮುತ್ತೈದೆಯರು ಪಾಡುತಾ3
***