Showing posts with label ನೀನೊಲಿದರೇನು ಏನಿಲ್ಲ ಹರಿಯೆ ನೀನೊಲಿಯದಿರೆ ಮಾತ್ರ ಏನೇನು ಇಲ್ಲ gadugina veeranarayana. Show all posts
Showing posts with label ನೀನೊಲಿದರೇನು ಏನಿಲ್ಲ ಹರಿಯೆ ನೀನೊಲಿಯದಿರೆ ಮಾತ್ರ ಏನೇನು ಇಲ್ಲ gadugina veeranarayana. Show all posts

Wednesday, 1 September 2021

ನೀನೊಲಿದರೇನು ಏನಿಲ್ಲ ಹರಿಯೆ ನೀನೊಲಿಯದಿರೆ ಮಾತ್ರ ಏನೇನು ಇಲ್ಲ ankita gadugina veeranarayana

 ..

kruti by ವೀರನಾರಾಯಣ Veeranarayana 


ನೀನೊಲಿದರೇನು ಏನಿಲ್ಲ ಹರಿಯೆ ಪ


ನೀನೊಲಿಯದಿರೆ ಮಾತ್ರ ಏನೇನು ಇಲ್ಲ ಅ.ಪ.


ಸಾಧನವು ಸಂಪತ್ತು ಸಾಧಿಸದೆ ದೊರೆಯುವುದುಪಾದಗಳ ಸೇವೆ ತಾ ತಾನಾಗಿ ಲಭಿಸುವುದುಖೇದ ವ್ಯಸನಗಳೆಲ್ಲ ಬಾಧಿಸದಲೋಡುವುದುಸಾಧು ಸಂಗವು ಭಕ್ತಿ ಬೋಧಿಸದೆ ಬರುವವು 1


ವಾಸುದೇವನೆ ವಿಪುಲ ಐಸಿರಿಯನೀಡುತಲೆಬೇಸರದೆ ನಿನ್ನವರ ಲೇಸಾಗಿ ಸಲಹುವೆಯೊದಾಸ ಭಕುತರು ಶೆರಗ ಹಾನಿ ಬೇಡಿದರೇನುಶೇಷಶಯನನೆ ನಿನ್ನ ಈಸು ಮಹಿಮೆಯ ತಿಳಿಯೆ 2


ಮನಸು ನಿನ್ನಡಿಗಳಲಿ ಕೊನೆತನಕ ಇರಿಸುವದುಘನಕೆಲಸ ನಿನದಯ್ಯ ಮನುಜರಿಗೆ ಸಾಧ್ಯವೇತನುಮನಗಳಿವು ನಿನ್ನವೆ ನನದೆಂಬುದೇನುಂಟುಧಣಿಯ ಗದುಗಿನ ವೀರನಾರಾಯಣನೆ ಒಲಿಯೋ 3

***