Showing posts with label ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು others. Show all posts
Showing posts with label ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು others. Show all posts

Friday, 27 December 2019

ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು others

ಶ್ರೀ ರಘುಪ್ರೇಮತೀರ್ಥರ ಸ್ಮರಣೆ bidi sanyasi sripadaraja mutt
ಶ್ರೀ ಸ್ವಾಮಿರಾಯಾಚಾರ್ಯ ಮುತ್ತಗಿ 

ಹಗಳಿರಲು ಭಜಿಸಿರೋ ರಘುಪ್ರೇಮತೀರ್ಥರನು ।
ಬಗೆ ಬಗೆಯ ಸುಖಗಳನು ಕೊಡುವರಿವರು ।। ಪಲ್ಲವಿ ।।

ದಾನ ಧರ್ಮಗಳಲ್ಲಿ ।
ಭಾನುಜಗನು ನೆನಿಸಿ ।
ಮಾನಸ ಪೂಜೆಯಲಿ ನಿರುತರಾಗಿ ।।
ಏನು ಹೇಳಲಿ ಇವರ ಮಹಿಮೆಯ ಅಲ್ಪರಿಗೆ ।
ಏನೇನು ತೋರದೋ ಜ್ಞಾನಿಗಲ್ಲದಲೆ ।। ಚರಣ ।।

ಯಾದವಗಿರಿಯಲ್ಲಿ ಬಂದ ಹರಿ ಭಕ್ತರಿಗೆ ।
ಆದರೂಪಚಾರವನು ಮಾಡುತ ಅವರುಗಳ ।
ಬಾಧೆಗಳ ಪರಿಹರಿಸಿ ।।
ಮೋದವನು ಕೊಡುವಂಥ ಸಾಧು ।
ಯತಿಗಳಿವರು ಸಂದೇಹವಿಲ್ಲ ।। ಚರಣ ।।

ಸೃಷ್ಟಿ ಲಯ ಚಿಂತನೆಯ ಗುಟ್ಟಾಗಿ ಮಾಡುತ ।
ದಿಟ್ಟ ಮನಸ್ಸಿನಿಂದ ಕುಳಿತುಕೊಂಡು ।
ಸೃಷ್ಟಿ ಒಡೆಯಾ ಶ್ರೀ ತಿರುಮಲಾಪುರ ವಾಸನಲ್ಲಿ ।
ಮನಸಿಟ್ಟು ಹರಿ ಪದವನ್ನೇ ಸೇರಿದವರಿವರು ।। ಚರಣ ।।
*********