Showing posts with label ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ kalimardhanakrishna vadiraja teertha stutih. Show all posts
Showing posts with label ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ kalimardhanakrishna vadiraja teertha stutih. Show all posts

Monday, 2 August 2021

ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ ankita kalimardhanakrishna vadiraja teertha stutih

ಸಾಗಿಬಾರಯ್ಯ ಗುರುವೆ ವಾದಿರಾಜೇಂದ್ರಾರ್ಯ

ಬಾಗುವೆ ನಾ ನಿನಗೆ ಶಿರವಾ ಪ.


ಭಾಗವತರ ದುರಿತಾಘಂಗಳನೆ ಕಳೆದು

ಬಂದಾ ದುರ್ವಾದಿಗಳನೆ ಮರೆದು

ಸುರರೆಲ್ಲ ಇವರೆ ಮೇಲ್ ಪೂ ಮಳೆಯಗರೆದು

ತುಂಬುರರು ನರದರು ಗಾನಗಳಿಂದ ಮೆರೆದು

ಘಲುಘಲು ಘಲುರೆಂದು, ಅಪ್ಸರರು ನಾಟ್ಯಗಳ ಕುಣಿದು ಅ.ಪ.

ಹೊದ್ದ ಕಾವೆ ಶಾಟಯಲೊಪ್ಪುವಾ

ಶ್ರೀ ಮುದ್ರಿ ಗಂಧಾಕ್ಷತೆಯಿಂದಾ

ಗಳದಲ್ಲಿ ಶ್ರೀ ತುಳಸಿ ಪುಷ್ಪಮಾಲೆಗಳಿಂದಾ

ಝಗಝಗನೆ ಮುಖಕಮಲಳ್ಹೋಳವೋದು ಯೆಂದಾ

ಋಜುಗಣದವರಹುದೆಂದು ಪೇಳುವಾನರನಿಂದಾ

ಮಾಡುವವರಿಗೆ ಕ್ರಿಮಿಕೀಟಗಳು ದುರುವುವುದೇಹದಿಂದಾ

ಬಂದ ಜನರಿಗ್ಹರುಷ ಬಡಿಸುವದರಿಂದಾ ಮುದದಿಂದಾ 1


ಏನುಪೇಳಲಿ ಗುರುವೆ ನಿನ್ನ ಮಹಿಮೆಯು

ನೋಡಲಾಶ್ಚರ್ಯವೋ ಭೂತರಾಜರಿಂದ

ಪೂಜೆಗೊಂಬುವ ಛಂದವೋ

ಧಿಂ ಧಿಮಿ ಧಿಮಿಕೆಂದು ಕುಣಿದಾಡುವಾನಂದವೊ

ಯಡಬಲದಿ ದ್ವಾರ ಪಾಲಕರಿರುವಾನಂದವೋ

ಬಂದ ಜನರು ಭಕ್ತಿಯಿಂದ ಭಜಿಸುವರಿಗೆ

ಮುಕ್ತಿಯನೆ ಕೊಡುವಾ 2


ನಿನ್ನಂಥಾ ಕರುಣಿ ಗುರು ಇನ್ನಿಲ್ಲ ಧರೆಯೊಳು

ಮನ್ನೀಸಿ ಸಲಹಯ್ಯ ಮಹರಾಯ

ಘನ್ನ ಸಂಸಾರದೊಳು ಬನ್ನಪಟ್ಟು ಬಹಳ ನೊಂದೇನೀ

ಕೈಪಿಡಿದು ಎಂದು ನಿಂದೀನೀ

ಉದ್ಧಾರ ಮಾಡಬೇಕೆಂದು ಬಂದೀನಿ

ನಿನ್ನಂಥ ಮಂದ ಭಾಗ್ಯ ಜೀವನ

ಕುಂದುಗಳೆಣಿಸಿದಾಗೊದೊ ಇಂದು

ಅಡಿಗಡಿಗೆ ನಮೋ ಬೇಡುವೆನೋ ಬಂಧೊ 3


ರುಕ್ಮಿಣಿ ಕಳುಹಿದಾ ವಾಲೆಯು ತಾನು

ಶ್ರಿ ಕೃಷ್ಣಗರ್ಪಿಸಿದನು ದ್ವಿಜನು

ಸಾಮಾನ್ಯವಲ್ಲವೋ ಈತ

ಗುರುರಾಜನೆಂದೆನಿಸೀದಾ

ದುರ್ವಾದಿಗಳು ಜಯಸೀದಾ

ಪವಮಾನರಾಯನೆಂದೆನಿಸಿದಾ

ಸುರರಿಗಮೃತವನುಣಿಸೀದಾ ವೃಂದಾವನ

ಚಾರ್ಯರಿಂದ ಸೇವೆ ಸ್ವೀಕರಿಸೀದಾ ಸುಖವಸುರಿಸೀದಾ 4


ಸ್ವಾದೀಯಪುರದಲ್ಲಿ ಇರುವರೋ ಗುರುರಾಜರು

ಧವಳಗಂಗೆಯ ಸ್ನಾನ ಅಮೃತ ಪಾನ

ಬಂದ ಸೇವಕರಿಗಭೀಷ್ಟವ ಕರೆದು ತಾ ಕೊಡುವ

ದ್ರಷ್ಟ ಜನರಾ ಫಲ್ಗಳ ಮುರಿವಾ

ಸರ್ವೇಶನಲ್ಲದೆಂಬೋರ ಅಳಿವಾ

ಮಧ್ವಮತವನ್ನುದ್ದಾರ ಮಾಡುವ

ಕಾಳೀಮರ್ಧನಕೃಷ್ಣನೊಲಿವಾ 5

****