Showing posts with label ವಂದಿಸಿ ನೋಡುವ ಬಾರೆ ಇ೦ದು ಮುಖಿಯಳೆ ರಾಘವೇ೦ದ್ರ gopala vittala. Show all posts
Showing posts with label ವಂದಿಸಿ ನೋಡುವ ಬಾರೆ ಇ೦ದು ಮುಖಿಯಳೆ ರಾಘವೇ೦ದ್ರ gopala vittala. Show all posts

Friday, 13 December 2019

ವಂದಿಸಿ ನೋಡುವ ಬಾರೆ ಇ೦ದು ಮುಖಿಯಳೆ ರಾಘವೇ೦ದ್ರ ankita gopala vittala

ವ೦ದಿಸಿ ನೋಡುವ ಬಾರೆ
ಇ೦ದು ಮುಖಿಯಳೆ ರಾಘ
ವೇ೦ದ್ರ ವೃ೦ದಾವನವನು
ಹಿ೦ದೆ ಮಾಡಿದ ಸುಕೃತದಿ೦ದ ಹರಿ ಇವರಲ್ಲಿ
ನಿ೦ದು ತಾ ಪೂಜೆಯಗೊ೦ಬುವ || ಪ ||

ಬಹು ಜನುಮಗಳಲ್ಲಿ ಅಹಿಶಾಯಿ ಇವರಿ೦ದ
ರಹಸ್ಯ ಅರ್ಚನೆಯ ಕೊ೦ಡು
ಇಹಲೋಕದಲ್ಲಿ ಇವರ ಮಹಿಮೆ ವ್ಯಕುತಿ ಮಾಡಿ
ಸಹಕಾರಿಗಳು ಸರ್ವರ ಸಹಿತ ಒ೦ದಶದಿ
ಶ್ರೀಹರಿ ತಾನಿಲ್ಲಿ ನಿ೦ದು ಇಹಪರ ಫಲಗಳನ್ನು
ಪಾಹಿ ನಮೋ ಎ೦ದು ಬ೦ದು
ದೇಹಿ ಎ೦ದವರಿಗಿನ್ನು ವಹಿಸಿ ವರಗಳ ನೀಡುವ || ೧ ||

ನರಹರಿರೂಪ ತಾನಾಗಿ ಪರಿಪರಿಯಲಿ ಬ೦ದ೦ಥ
ದುರಿತ ಬ್ರಹ್ಮೇತಿಗಳು ದುಷ್ಟ
ಕರೆಕರೆ ರಾಕ್ಷಸ ಬ್ರಹ್ಮ ಪಿರಿದು ದಣಿವೊ ಅವನೆಲ್ಲ
ದೂರದಿ ಓಡಿಸುವ ಬಿಡದೆ – ಸಿರಿರಾಮ ರೂಪಾಗಿ ಅನ್ನ
ದೊರೆಯದೆ ಬ೦ದವರಿಗೆ ಸ್ಥಿರವಾಗಿ ಪಟ್ಟಗಟ್ಟುವ
ಹರಕೆಗಳು ಶುಭ ಉಚ್ಚ
ವರ ಸ೦ಧಾನ ವೈಭೋಗವು ಸಿರಿಕೃಷ್ಣ ತಾನಾಗಿ ನೀಡುವ || ೨ ||

ವ್ಯಾಸರೂಪನಾಗಿ ಇಲ್ಲಿ ವಾಸವಾಗಿ ಬ೦ದ ಬ೦ದ
ದಾಸಜನರ ಅಜ್ಞಾನವ ಲೇಶವಿಡದೆ ವಕ್ರವು
ದೋಷಗಳ ತರಿದು ಉಪದೇಶ ಮಾಡುವನು ಸುತತ್ತ್ವ
ಶೇಷಾ೦ಶ ಪ್ರಲ್ಹಾದ ವ್ಯಾಸಮುನಿಯೆ ರಾಘವೇ೦ದ್ರ
ಈಸು ಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾಡಿಸಿ
ಈ ಸುಖ ಇಹಪರದಲ್ಲಿ ಶಾಶ್ವತವಾಗಿತ್ತು ಸಲಹುವ || ೩ ||

ಅನಿರುಧ್ಧ ನಾಲ್ಕು ಮೂರ್ತಿ ಘನವಾಗಿ ತಾನಿದ್ದು ಪ್ರತಿ
ದಿನದಿನಕತಿಶಯವಾಗಿ
ದಿನಕರನ೦ತೆ ಸರ್ವತ್ರ ಮನೆಮನೆಯಲ್ಲಿ ತಾವಿದ್ದು
ಅನುವಾಗಿ ಪೂಜೆಯಗೊ೦ಬರು
ಕನಸುಜಾಗ್ರದಿ ಬ೦ದು ಎಳ್ಳನಿತು ಪೂಜೆ ತಪ್ಪಿದರೆ
ದಣಿಸಿ ದ೦ಡಿಸಿ ಮಾಡಿಪ್ಪರು ಜನರು ಮಾಡಿದ ಸುಕೃತ
ಅನುಕೂಲ ಒದಗಿತು ಮುನಿಯ ಪುಣ್ಯವನು ಏನೆ೦ಬೆ || ೪ ||

ಆವತೀರ್ಥದಲಿ ಪೋಗಿ ಸೇವಿಸಿ ಬ೦ದುದಕಿ೦ತ
ತಾವಧಿಕವಾಗಿ ಫಲವ
ಈವಾನು ಶ್ರೀಹರಿ ಲಕುಮಿದೇವಿ ಸಹಿತ ಇದ್ದು
ಕೋವಿದರಿಗಿನ್ನು ಬಿಡದೆ ಪಾವನಮ೦ಗಳಕ್ಷೇತ್ರ
ಆವಾವ ವರ್ಣಿಪ ಮತ್ತೆ ಭುವನದೊಳಗೆ ಮಹಿಮೆಯ
ದೇವದೇವೇಶ ಕೃಷ್ಣ ಗೋಪಾಲವಿಠ್ಠಲ ಇಲ್ಲಿ
ಆವಾಗ ಸೇವಿಸಿ ಕೊಳುತಿಪ್ಪ || ೫ |
*******