Showing posts with label ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ purandara vittala. Show all posts
Showing posts with label ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ purandara vittala. Show all posts

Thursday, 5 December 2019

ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ purandara vittala

ರಾಗ ನಾದನಾಮಕ್ರಿಯಾ. ಏಕ ತಾಳ

ಬ್ರಹ್ಮಾನಂದದ ಸಭೆಯೊಳಗಲ್ಲಿ
ಸುಮ್ಮನೆ ಇರುತಿಹುದೇನಯ್ಯ ||ಪ||

ಮೂಡದು ಕೂಡದು ಉಣ್ಣದು ಮಾಣದು
ಕಾಡದು ಬೇಡದು ಕಂಗೆಡದು
ನಾಡ ಮಾತುಗಳ ಬಲ್ಲುದು ಆದದು
ರೂಢಿಯೊಳಿರುತಿಹುದೇನಯ್ಯ ||

ಪೊಡವಿಗಧಿಕವೆಂಬುವರಿಗೆ ಬಲ್ಲುದು
ಕಡೆಮೊದಲಿಲ್ಲದ ಒಡಲಿಹುದು
ಬೆಡಗನರಿವೆನೆಂಬವರಿಗಗೋಚರ
ಪೊಡವಿಯೊಳಗಣ ಭಕ್ತರ ಬಲ್ಲುದು ||

ನಿಲ್ಲದು ನಿಲುಕದು ಎಲ್ಲಿಗೆ ಪೋಗದು
ಬಲ್ಲೆನೆಂಬವರಿಗಳವಡದು
ಬಲ್ಲಿದ ನಮ್ಮ ಪುರಂದರವಿಟ್ಠಲ-
ಗಲ್ಲದೆ ತಿಳಿಯದು ಜಗದೊಳಗೆ ||
***

pallavi

brahmAnandada sabheyoLagalli summane irudihudEnayya

caraNam 1

mUDhadu kUDadu uNNadu mANadu kADadu bEDadu gangeDadu
nADa mAtugaLa balludu Adadu rUDhiyoLirutihudEnayya

caraNam 2

poDavigadhikavembuvarige balludu kaDe modalillada oDalihudu
beDaganarivenembavariga gOcara poDaviyoLagaNa bhaktara balludu

caraNam 3

nilladu nilukadu ellike pOgadu ballenembavarigaLavaDadu
ballida namma purandara viTTala gallade tiLiyadu jagadoLage
***