ರಾಗ ನಾದನಾಮಕ್ರಿಯಾ. ಏಕ ತಾಳ
ಬ್ರಹ್ಮಾನಂದದ ಸಭೆಯೊಳಗಲ್ಲಿ
ಸುಮ್ಮನೆ ಇರುತಿಹುದೇನಯ್ಯ ||ಪ||
ಮೂಡದು ಕೂಡದು ಉಣ್ಣದು ಮಾಣದು
ಕಾಡದು ಬೇಡದು ಕಂಗೆಡದು
ನಾಡ ಮಾತುಗಳ ಬಲ್ಲುದು ಆದದು
ರೂಢಿಯೊಳಿರುತಿಹುದೇನಯ್ಯ ||
ಪೊಡವಿಗಧಿಕವೆಂಬುವರಿಗೆ ಬಲ್ಲುದು
ಕಡೆಮೊದಲಿಲ್ಲದ ಒಡಲಿಹುದು
ಬೆಡಗನರಿವೆನೆಂಬವರಿಗಗೋಚರ
ಪೊಡವಿಯೊಳಗಣ ಭಕ್ತರ ಬಲ್ಲುದು ||
ನಿಲ್ಲದು ನಿಲುಕದು ಎಲ್ಲಿಗೆ ಪೋಗದು
ಬಲ್ಲೆನೆಂಬವರಿಗಳವಡದು
ಬಲ್ಲಿದ ನಮ್ಮ ಪುರಂದರವಿಟ್ಠಲ-
ಗಲ್ಲದೆ ತಿಳಿಯದು ಜಗದೊಳಗೆ ||
***
ಬ್ರಹ್ಮಾನಂದದ ಸಭೆಯೊಳಗಲ್ಲಿ
ಸುಮ್ಮನೆ ಇರುತಿಹುದೇನಯ್ಯ ||ಪ||
ಮೂಡದು ಕೂಡದು ಉಣ್ಣದು ಮಾಣದು
ಕಾಡದು ಬೇಡದು ಕಂಗೆಡದು
ನಾಡ ಮಾತುಗಳ ಬಲ್ಲುದು ಆದದು
ರೂಢಿಯೊಳಿರುತಿಹುದೇನಯ್ಯ ||
ಪೊಡವಿಗಧಿಕವೆಂಬುವರಿಗೆ ಬಲ್ಲುದು
ಕಡೆಮೊದಲಿಲ್ಲದ ಒಡಲಿಹುದು
ಬೆಡಗನರಿವೆನೆಂಬವರಿಗಗೋಚರ
ಪೊಡವಿಯೊಳಗಣ ಭಕ್ತರ ಬಲ್ಲುದು ||
ನಿಲ್ಲದು ನಿಲುಕದು ಎಲ್ಲಿಗೆ ಪೋಗದು
ಬಲ್ಲೆನೆಂಬವರಿಗಳವಡದು
ಬಲ್ಲಿದ ನಮ್ಮ ಪುರಂದರವಿಟ್ಠಲ-
ಗಲ್ಲದೆ ತಿಳಿಯದು ಜಗದೊಳಗೆ ||
***
pallavi
brahmAnandada sabheyoLagalli summane irudihudEnayya
caraNam 1
mUDhadu kUDadu uNNadu mANadu kADadu bEDadu gangeDadu
nADa mAtugaLa balludu Adadu rUDhiyoLirutihudEnayya
caraNam 2
poDavigadhikavembuvarige balludu kaDe modalillada oDalihudu
beDaganarivenembavariga gOcara poDaviyoLagaNa bhaktara balludu
caraNam 3
nilladu nilukadu ellike pOgadu ballenembavarigaLavaDadu
ballida namma purandara viTTala gallade tiLiyadu jagadoLage
***
No comments:
Post a Comment