Showing posts with label ಕಾಯೋ ಕರುಣಾಭಯ ಕೃದ್ಭಯನಾಶನ mahipati. Show all posts
Showing posts with label ಕಾಯೋ ಕರುಣಾಭಯ ಕೃದ್ಭಯನಾಶನ mahipati. Show all posts

Thursday, 12 December 2019

ಕಾಯೋ ಕರುಣಾಭಯ ಕೃದ್ಭಯನಾಶನ ankita mahipati

ಸೋಹನಿ ರಾಗ ಝಂಪೆತಾಳ 

ಕಾಯೊ ಕರುಣಾಭಯ ಕೃದ್ಭಯನಾಶನ ||ಧ್ರುವ||

ಕಂದ ಪ್ರಹ್ಲಾದಗಾಗಿ ಸಂಧಿಸೊದಗಿ ನಿಂತು
ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ ||೧||

ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ
ಉಪಾಯದಲಿಗಾಯ್ದ ಅಪಾರಮಹಿಮ ||೨||

ಕರಿಯ ಮೊರೆಯನು ಕೇಳಿ ಸೆರೆಯ ಬಿಡಿಸಿದೆ ಎಂದು
ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು ||೩||

ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ
ಪರಿಪರಿಯಿಂದ್ಹೊರೆದೆ ವರದ ಮುನಿಗಳ ||೪||

ಶರಣು ಹೊಕ್ಕೆನು ನಿಮ್ಮ ತರಳ ಮಹಿಪತಿ ಪ್ರಾಣ
ಹೊರೆದು ರಕ್ಷಿಸು ಎನ್ನ ಪರಮಪಾವನ ||೫||
***

ಕಾಯೊ ಕರುಣಾಭಯ ಕೃದ್ಭಯ ನಾಶನ ಪ 

ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ 1 
ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು 2 
ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರ ಮಹಿಮ 3 
ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರಮುನಿಗಳ 4 
ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ 5
****