ತತ್ತ್ವ ತಿಳಿಯದು ಅಹಂಮತ್ವ ಅಳಿಯದನಕ pa
ವಿದೇಹ ಸುದೇಹಾಗದನಕ ಸಂದೇಹ ಸಂಶಯ ಸಂಕಲ್ಪ ಹೋಗದನಕ 1
ಪ್ರವೃತ್ತಿ ನಿವೃತ್ತಿ ಸುವೃತ್ಯಾಗಕನಕ ಸ್ವಪ್ನ ಸುಷಪ್ತಿ ಜಾಗ್ರ್ಯತ್ಯಾಗದನಕ 2
ದೃಷ್ಟ ಅದೃಷ್ಟ ಸದ್ರಷ್ಟಾಗದನಕ ದುಷ್ಟನಷ್ಟಗಳ ಸಂಕಷ್ಟೋಗದನಕ 3
ಲಬ್ಧ ಅಲಬ್ಧ ಪ್ರಾಲಬ್ಧಾಗದನಕ ಶಬ್ಧ ನಿಶ್ಯಬ್ಧ ಸುಶಬ್ದಾಗದನಕ 4
ಭಾವ ಅಭಾವ ಸ್ವಭಾವಾಗದನಕ ಮಾಯ ಮೋಹದ ಮನೆಯು ಮುಕ್ಕಾಗದನಕ 5
ಸದ್ಗುರು ದಯಕರುಣ ಕೃಪೆ ಅಗದನಕಮಹಿಪತಿ ನಿನ್ನೊಳು ನೀ ಬೆರಿಯತನಕ 6
***