..
by ಗುರುತಂದೆವರದಗೋಪಾಲ ವಿಠಲ
(ಆರೋಹಣ ಕ್ರಮದಲ್ಲಿ ದಾಸ-ಗುರು-ದೇವತಾನಮನ)
ಅಕ್ಕ ನೋಡೆ ನಾನಾ ನಿನ್ನ ದಯದಿಂದ ಗುರು ರಂಗವಲಿದದಾಸರ ಕನುಷಿನೊಳಗುಳ್ಳ ರಕ್ಕಸರಿಗೆಲ್ಲ ಕಕ್ಕಸವಾಗುತಿದೆ ದಕ್ಕಲಾರದು ಇನ್ನು ರೊಕ್ಕ ರೊಕ್ಕಕ್ಕೆ ಸಿಕ್ಕಿ ಬಲುಪರಿಯಿಂದ ಸೊಕ್ಕಿ ಧಕ್ಕೆ ತಿನ್ನುತ ಇದ್ದು ಶಕ್ಕುತಿಯಿಲ್ಲದೆ ಯನಗೆ ಪುಕ್ಕಟೆ ಸಿಕ್ಕಿತುಯೆನ್ನ ಕಕ್ಕನು ಇವರಕ್ಕಮುಕ್ಕಿ ಮಹ ಪಕ್ಕಿವಾಹನ ತಂದೆವರದಗೋಪಾಲವಿಠಲನ ತೋರುವಾ 1
ಮಂಗಳ ಮಹಿಮವರ ತುಂಗ ತೀರದಿ ನಿಂದ ತುಂಗಮಹಿಮ ಗುರು ರಾಘವೇಂದ್ರನ ಅನುಜನೆ ಇವನು ವಂದನೆ ಇಲ್ಲದೆ ವಿಪ್ರವೃಂದಗಳಿಗೆ ಬಹು ಕುಂದು ಮಾಡುವೊ ಮನದಿಂದ ಮರೆವುತಿರೆ ಅಂದು ವಂದು ವತ್ಸರ ತಿರುವೇಂಗಳೇಶನ ಯಾತ್ರಿಗೆ ಬಂದಾನೆಂದು ವರ ವೀರವಿಜಯಾಖ್ಯ ರಾಯನು ಬಂದಿರೆ ಅಂದು ತಂಬೂರಿ ಮೀಟುತ ಇಂದಿರೆ ರಮಣನ ತುತಿಸುತಿರೆ ಮಹಾ ಮಂದಭಾವದಿ ದಾಸರ ನಿಂದಿಸೆ ಅವರು ವಂದನೆಯಲ್ಲದೆ ಛಂದಾಗಿ ಕುಳಿತಿರೆ ಕುಂದುಬಂದು ಕೊರತೆ ಆಯಿತು ಕ್ಷೀಣವೃದ್ಧಿಗೆ ಬಂದು ಕ್ಷಯರೋಗ ಪ್ರಾಪುತವಾಗಲು ಬಂದು ಮತ್ತೆ ದಾಸರ ದ್ವಂದ್ವಕೆ ಬಾಗೆ ನಿನ್ನ ಉದ್ಧರಿಪಾ ಕರ್ತು ನಾನಲ್ಲ ಚಂದ್ರ ಪುರಕೆ ಪೋಗು ಭಾಗಣ್ಣನೆಂಬುವನುಂಟು ಶಿರಿ ಅರಸ ವರದಗೋಪಾಲವಿಠಲನ ದಯದಿಂದಾ ಬಂದು ಸೇರಿದರು 2
ಕಾಲವ ಮೀರುತ ವಿಪ್ರರ ಪಾಲಿಪ ಗೋಪಾಲದಾಸರು ಶೀಲದಿಕರದು ಬಾಲಗೆ ಬೋಧಿಸಿ ಎಲ್ಲರ ಭೇದಿಸಿ ಸುರರೆಲ್ಲರ ಮೋದಿಸಿ ತನು ಮೆಲ್ಲನೆ ಪೋಷಿಸಿ ಕಲಶದಿ ಸುಧಿಯಿತ್ತು ಅಪರೋಕ್ಷ ಪಾಲಿಸಿ ಮಂತ್ರಗಳುಪದೇಶಿಸಿ ಚರಣಂಗಳ ಲಯ ಮಾಡಿಸಿ ನಿರುತದಿ ಪಾಲಸಾಗರಶಾಯಿ ತಂದೆವರದಗೋಪಾಲವಿಠಲನ ನಿಲ್ಲಿಸಿ ಕೊಟ್ಟುಬಿಡದೆ3
ತರುವಾಯ ತಾನು ಮಾನವಿ ಪುರದಲ್ಲಿ ವಾಸವ ಮಾಡುತ ದಾಸರ ಪೋಷಿಸಬೇಕೆನುತ ಆಶೆಯುಕ್ತ ದೋಷರಹಿತಭಾವಿ ವಾಯುಪದಸ್ಥ ಸ್ವಾದಿರಾಜರ ಆe್ಞÁವ ಧರಿಸಿ ಶೇರಿ ಅರಸನ ಮಹಿಮೆಯ ಶೋಧಿಸಿ ಭಾಗವತಾದಿ ಶಾಸ್ತ್ರ ಅರ್ಥಸಮ್ಮತ ಕವನದಿ ರಚಿಸಿ ಹರಿಕಥಾಮೃತಾಖ್ಯ ಗುಣಸಾಗರ ಸಾರವೆಂದು ನಾಮವೆನಿರ್ಮಿಸಿ ಕುಮತವ ಭೇದಿಸಿ ಹಾನಿ ವೃದ್ಧಿಯ ಭೇದಿಸಿ ನೀತಿ ಹಿತನ ದ್ವಾರ ಜಗನ್ನಾಥವಿಠಲನೆಂಬೊ ಪೆಸರು ಪಡೆದು ತೀರ್ಥಕ್ಷೇತ್ರಾದಿಯಾಟಿಸಿ ಗಾತ್ರವ ಘೋಟಿಸಿಸೂತ್ರವ ಮೀಟುತ ಪಾತ್ರರ ಸಂಗಡ ಚಿತ್ರವೇಷವ ಧರಿಸಿ ವರ್ತನೆಗ್ಯಯ್ಯುತ ಸೂತ್ರನಾಮಕ ಕೃಷ್ಣನಂತರ್ಯಾಮಿ ಸೂತ್ರವಂದಿತ ತಂದೆವರದಗೋಪಾಲವಿಠಲನ ಭಜಿಸಿ ಮಹಪದವೈದ 4
ಆನಂದ ಆನಂದ ಮಹಾಸಾಗರದೊಳಗೆ ಮುಳುಗಿ ಶಿಂಧುಶಯನ ಅರವಿಂದನಯನನ ಪೊಂದಿ ಮಹ ಪೊಂಗೊಳಲನೂದುತ ಜಗಂಗಳ ಪೋಗುತ ಗಂಗಾಜನಕ ಹರಿ ಗೋವಿಂದನಾಶ್ರಯಿಸಿ ದ್ವಂದ್ವಾವ ಭಜಿಸುತ ಮಂಗಳ ಮೂರುತಿ ಸ್ವಪನದಿ ಬಂದು ನಂದಾದಿ ಕವನ ಪೇಳಿ ಪವಿತ್ರನ ಮಾಡಿದಿ ಭಾವಿ ಭಾರತಿ ವರನ ಮಹಿಮೆಗೆಣೆಯುಂಟೆ ಹನುಮ ಭೀಮ ಮಧ್ವಾತ್ಮಕ ರೂಪಧಾರಿಗುರುರಾಜಾಂತರ್ಗತ ತಂದೆವರದಗೋಪಾಲವಿಠಲನು ಬಂದು ವದಗಿದ ವಾಸನಾಮಯದಿ 5
ಜತೆ :ಪಾತಕ ಪೋಯಿತು ಪೂತಾತ್ಮಕನ ಸೇವಿಪ ಜಗನ್ನಾಥರಾಯನ ಕಂಡೇ ಹರಿರೂಪಧಾರಿ ಗುರು ತಂದೆವರದಗೋಪಾಲವಿಠಲನ ದಯದಿಂದಾ 6
****