ಗುರುವೇ ಕರೆದರೆ ಬರಬಾರದೆ ||ಪ||
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು
ನಿನ್ನ ಕರೆದರೆ ಬರಬಾರದೆ ||೧||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ
ನಿನ್ನ ಕರೆದರೆ ಬರಬಾರದೆ ||೨||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ
ನಿನ್ನ ಕರೆದರೆ ಬರಬಾರದೆ
ಗುರುವೇ ಕರೆದರೆ ಬರಬಾರದೆ||೩
***
pallavi
karedare barabArade guru rAghavEndrA
anupallavi
vara mantrAlaya pura mandira tava caraNa sEvakaru karava mugidu
caraNam
haridAsaru su-svara sammELadi bharavashadali bAyi teradu kUgi
bhUcura pitA kamalEshaviThala dAsagrEsaru I samayadali
***
ಕರೆದರೆ ಬರಬಾರದೆ? || ಪ ||
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು || ೧ ||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ || ೨ ||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ || ೩ ||
********
ಕರೆದರೆ ಬರಬಾರದೆ? || ಪ ||
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು || ೧ ||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ || ೨ ||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ || ೩ ||
********
The evergreen Karedare is another highly popular song.
“karedare barabarade
guru Raghavendra
vara mantralaya pura mandira
tava carana sevakaru karava mugidu || 1||
haridasaru susvara sammeladi
paravashadali bayteredu koogi ||2||
pusharapita kamalesha vithalana dasagresaru ee samayadi ||3||
****
ಕರೆದರೆ ಬರಬಾರದೆ !
ಸುರಪುರದ ಆನಂದ ದಾಸರು ಪಂಚಮುಖಿ ಮುಖ್ಯಪ್ರಾಣ ದೇವರ ಸೇವೆಗೆ ಮಂತ್ರಾಲಯ ಹತ್ತಿರದ ಗಾಣದಳದಲ್ಲಿ ಸೇವೆಗೆ ಬಂದಿರುತ್ತಾರೆ. ಶ್ರಾವಣ ಮಾಸ ಕೃಷ್ಣ ಪಕ್ಷ ರಾಯರ ಆರಾಧನೆಯ ಸಮಯ ರಾಯರ ದರ್ಶನಕೆ ದಾಸರು ಪಂಚಮುಖಿ ಇಂದ ಮಂತ್ರಾಲಯಕೆ ಹೊರಡಲು ಸಿದ್ದರಾಗುತ್ತಾರೆ. ತುಂಗಭದ್ರಾ ನದಿಯಲ್ಲಿ ಪ್ರವಾಹ ,ದುಮಿಕ್ಕಿ ಹರಿತಿರೋ ನದಿ. ಹರಿಗೋಲು ಹಾಕುವವನಿಗೆ ದಾಸರು ದಡ ಸೇರಿಸಲು ಕೇಳುತ್ತಾರೆ. ಹೆಚ್ಚುಪ್ರವಾಹ ಇದ್ದದರಿಂದ ಅಂಬಿಗ ಸೇರಿಸುವುದು ಕಷ್ಟಸಾಧ್ಯ ಮದ್ಯೆ ಪ್ರವಾಹ ಹೆಚ್ಚಾದರೆ ನಾನು ಜವಾಬ್ದಾರನಲ್ಲ ಅಂತ ಹೇಳಿ ಹೊರಡಲು ಸಿದ್ದರಾಗುತ್ತಾರೆ.
ನದಿ ಮದ್ಯದಲ್ಲಿ ಪ್ರವಾಹ ಹೆಚ್ಚಿ ಹರಿಗೋಲು ಮುಲುಗಳು ಪ್ರಾರಂಭವಾಗುತ್ತದೆ. ಅಂಬಿಗ ಹರಿಗೋಲು ಬಿಟ್ಟು ಪ್ರವಾಹದಲ್ಲಿ ಈಗಿಕೊಂಡು ಹೋಗುತ್ತಾನೆ. ದಾಸರು ಆ ತತ್ಕ್ಷಣವೇ ರಾಯರು ಮತ್ತು ತಮ್ಮ ಸ್ವರೂಪೋಧಾರಕ ಗುರುಗಳಾದ ಅಪ್ಪಾವನ್ನು ಪ್ರಾರ್ಥನೆ ಮಾಡುತ್ತಾರೆ. ನದಿ ದಡದಲ್ಲಿ ಇಬ್ಬರು ಕವಿಧಾರಿಗಳು ನದಿಯಲ್ಲಿ ಈಜಿ ದಾಸರನು ದಡಕ್ಕೆ ಸೇರಿಸುತ್ತಾರೆ. ದಾಸರು ಪ್ರಾಣವನ್ನು ಕಾಪಾಡಿದ ಅವರು ತಮ್ಮನ್ನು ರಾಘಪ್ಪ-ವಾಜಪ್ಪ ಅಂತ ಪ್ರರಿಚಯ ಮಾಡಿಕೊಂಡು ಅದೃಶ್ಯರಾದರು.
ಮಂತ್ರಾಲಯ ತಲುಪಿದ ದಾಸರು ಅಲ್ಲಿ ಅಪ್ಪಾವರು ಸೇರಿ ಹಲವು ಜ್ಞಾನಿಗಳ ಸಂಗಮವಿತ್ತು. ಅಪ್ಪಾವರು ದಾಸರನು ಕಂಡು ಅವರಿಗೆ ಬರಮಾಡಿಕೊಂಡು ಅವರ ಯೋಗಕ್ಷೇಮ ವಿಚಾರಿಸುತ್ತಾ ಪ್ರವಾಹ ಹೇಗ್ ಇತ್ತು ಅಂತ ಅಪ್ಪಾವರು ದಾಸರಿಗೆ ಕೇಳುತ್ತಾರೆ. ದಾಸರು ತಾವು ಪಾರಾದ ಪ್ರವಾಹ ಅಪ್ಪಾವರ ಜ್ಞಾನ ದೃಷ್ಟಿಗೆ ಬಂದಿದ್ದನು ನೋಡಿ ಸಾಷ್ಟಾಂಗ ನಮಸ್ಕರಿಸಿದರು . ಅಪ್ಪಾವರು ದಾಸರಿಗೆ ಪ್ರವಾಹದಲ್ಲಿ ಕಾಪಾಡಿದು ರಾಘಪ್ಪ-ವಾಜಪ್ಪ ಬೆರೆಯಾರು ಅಲ್ಲ ರಾಘವೇಂದ್ರ ಗುರುಸರ್ವಭೌಮರು ಹಾಗೂ ವಾದೀಂದ್ರತೀರ್ಥರು ಅಂತ ಹೇಳಿ ಅನುಗ್ರಹಿಸುತ್ತಾರೆ.
ಕರೆದರೆ ಬರಬಾರದೆ |
ಗುರುವರ ಶ್ರೀರಾಘವೇಂದ್ರ ||
ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು ||
ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ ||
ಭೂಸುರರೊಳಗೆ ಪ್ರಕಾಶ ಕೃಷ್ಣಾರ್ಯರು
ಹಾಸ ಮುಖದಿ ಅಭಿಲಾಷೆಯಿಂದ ||
ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ ||
- ವಿಷ್ಣುತೀರ್ಥಚಾರ್ಯ ಇಭರಾಮಪುರ
***