Showing posts with label ಪೋದರಯ್ಯ ತೆರಳಿ ಪೋದರು ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ shyamasundara. Show all posts
Showing posts with label ಪೋದರಯ್ಯ ತೆರಳಿ ಪೋದರು ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ shyamasundara. Show all posts

Wednesday, 1 September 2021

ಪೋದರಯ್ಯ ತೆರಳಿ ಪೋದರು ಸಾಧುನರಸಿಂಹಾರ್ಯರು ಮಾಧವನ ಮಂದಿರಕೆ ankita shyamasundara

 ..

ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು

ಮಾಧವನ ಮಂದಿರಕೆ ಪ


ಶ್ರೀಕರ ಕೃಷ್ಣಾತಟದಿ

ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ

ಸದಾ ಶ್ರೀಕಾಂತನ್ನ ಧ್ಯಾನಂಗತರು 1


ಭಾರತ ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ

ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ 2


ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ |

ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು 3


ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ

ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು 4


ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ

ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ 5


ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ

ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ 6


ಯಾವ ಸಂಶಯವ್ಯಾಕೆ ಕೋವಿದವರ್ಯರಾದ |

ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು 7


ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ

ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ 8


ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ

ಪಿಸಿ ಬಿಂಬೋಪಾಸನಗೈವ ಬುಧರು 9


ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ

ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ 10


ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು |

ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು 11


ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ

ಹರುಷದಿಂದ ಸೋಂಕಿದಂಥ ಚರಿಯ ನರೆÉದ ಜನಕೆ ತೋರಿ 12


ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ |

ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು 13

***