ಆದದ್ದಾಯಿತು ಇನ್ನಾದರು ಒಳ್ಳೆ ಹಾದಿ ಹಿಡಿಯೊ ಪ್ರಾಣಿ|
ಈ ದುರ್ನಡತಿಂದ್ಹೋದರೆ ಇಹ ಪರದಿ ಮೋದವೆಂದಿಗೂ ಕಾಣೆ ಪ್ರಾಣಿ||ಪ||
ನೆಲಾ ಸತಿ ಧನದೊಳಾನವರತ ಹುಳಾಗಿ ಇರುವ್ಯೆಲ್ಲೋ|
ಹಲಾ ಪಿಡಿದು ವಿಧಿ ಕುಲಾಚರಣೆ ಬಿಡೆ ಪಲಾ ತರುವರ್ಯಲ್ಲೋ||
ಸ್ಥಳಾಸ್ಥಳರಿಯದೆ ಕಲಾಪಮಾಡೆಘಕೊಳಾಗುವುದು ಸಲ್ಲೋ|
ಎಲಾ ಕೇಳುವಂತಿಲಾ ಮಾತ್ರ ನೀ ಗೆಲಾಹ ಬಗೆ ಇಲ್ಲೋ ಪ್ರಾಣಿ||೧||
ಶಿಲಾದಿ ವಿಗ್ರಹ ಥಳಾಸೆ ಹರಿ ಯೆಂಬೆಲಾ ಕೇವಲ ಸುಳ್ಳೋ|
ಚಲಾ ಪ್ರತಿಮೆ ಪದಗಳಾ ರ್ಚಿಸದಲೆ ಮಲಾ ತಿನುತಿಹ್ಯಲ್ಲೋ||
ಕಳಾ ಬಿಡದಿರೆ ಅನಿಳಾನ ಹರಿ ಮನಿಮೊಳಾಗಿಹುದಲ್ಯೋ|
ನಳಾ ಭರತ ಮುಖ ಇಳಾಣ್ಮರಂದದಿ ಭಲಾ ಎನಿಸಲಿಲ್ಯೋ ಪ್ರಾಣಿ||೩||
ಬಿಲಾ ಸೇರಿ ತಲಿ ಕೆಳಾಗೆ ತಪಿಸಲು ಫಲಾ ಲೇಸಿತಿಲ್ಯೋ|
ಖಳಾರಿ ದಿನ ಬಿಂದ್ಜಲಾ ಕೊಳ್ಳನೆಂ ಛಲಾ ಮಾಡಲಿಲ್ಯೋ||
ಬಲಾದರದಲಿಂ ತುಲಾದಿ ಸ್ನಾನ ಮೊದಲಾದ ವ್ರತವಲ್ಲೋ|
ಬಲಾರಿನುತ ಪ್ರಾಣೇಶವಿಟ್ಠಲನ ಬಲಾಗಳಿಸಿಕೊಳ್ಳೋ ಪ್ರಾಣಿ||೩||
*****
ಆದದ್ದಾಯ್ತಿನ್ನಾದರೂ ಒಳ್ಳೆ ।
ಹಾದಿ ಹಿಡಿಯೋ ಪ್ರಾಣೀ ।। ಪಲ್ಲವಿ ।।
ಈ ದುರ್ನಡೆತಿಂದು ।
ಹೋದರಿಹಪರದಿ ।
ಮೋದವೆಂದಿಗೂ ಕಾಣೀ ಪ್ರಾಣೀ ।। ಆ. ಪ ।।
ನೆಲಾ ಸತೀ ಧನದೊಳಾನವರತ್ಯಾ
ಹುಳಾಗಿ ಇರುವೆಲ್ಲೋ ।
ಹಲಾ ಪಿಡಿದು ವಿಧಿ ಕುಲಾಚರಣೆ ಬಿಡೆ
ಪಲಾ ತಗುವರಲ್ಲ್ಯೊ ।
ಸ್ಥಳಾಸ್ಥಳರಿಯದೆ ಕಲಾಪ ಮಾಡೆಘ
ಕೂಳಾಗುವುದು ಸಲ್ಲೋ ।
ಎಲಾ ಕೇಳುವಂತಿ ಮಾತ್ರ ನೀ
ಗೆಲಾಹ ಬಗೆ ಇಲ್ಲೋ ।। ಚರಣ ।।
ಶಿಲಾದಿ ವಿಗ್ರಹ ಥಳಾಸೆ ಹರಿಯಂಬೆಲ
ಕೇವಲ ಸುಳ್ಳೋ ।
ಚಲಾ ಪ್ರತಿಮಿ ಪದಗಳಾರ್ಚಿಸದಲೇ
ಮಲಾ ತಿನುತಿಹ್ಯಲ್ಲೋ ।
ಕಳಾ ಬಿಡದಿರೆ ಆನಿಳಾನ ಹರಿಮನಿ
ಮೊಳಾಗಿದೆಯಲ್ಲೋ ।
ನಳಾ ಭರತಮುಖ ಇಳಾಣ್ಮರಂದದಿ
ಭಲಾ ಯನಿಸಲಿಲ್ಲೋ ।। ಚರಣ ।।
ಬಿಲಾ ಸೇರಿ ತ;ಲಿ ಕೆಳಗಾಗಿ ತಪಿಸಲು ।
ಫಲಾ ಲೇಸಿತಿಲ್ಲೋ ಖಳಾರಿ ದಿನ । ಬಿಂ ।
ಜಲಾ ಕುಳ್ಳೆನೆಂ ಛಲಾ ಮಾಡಲಿಲ್ಲೋ ।।
ಬಲಾದರದಲಿಂ ತುಲಾದಿ ಸ್ನಾನ । ಮೊದ ।
ಲಾದ ವೃತವಲ್ಲೋ ಬಲಾರಿನುತ ।
ಪ್ರಾಣೇಶವಿಠಲನ್ನ ಬಲಾ ಘಳಿಸಿ ಕೊಳ್ಳೋ ।।
***
AdaddAytinnAdaru oLLe
hAdi hiDiyo prANi
I durnaDatindOdarihaparadi
mOdeMdigu kANe | pa |
nelAsati dhanadoLanAvarata
huLAgi iruvello
halApiDidu vidhi kulAcaraNE biDe-
palA taruvarallo
sthaLAsthaLariyade kalApamADyaGa-
koLAguvudu sallo
ele kELuvnilAmAtra nI
gelAha bage illo | 1 |
SilAdivigraha thaLAse hariyaM
belA kEvala suLLo
calA pratimi padagaLArcisadale
malA tinutihello
kaLAviDidare aniLAna harimane
moLAgihadallo
naLA Barata muKa iLANmaraMdadi
BalAyenisalillo | 2 |
bilAsEri talakeLakAgi tapisalu
PalAlEsinitillo
KaLAri dina bindjalAkoLLenendu
CalA mADalillo
balAdaradaMliM tulAdi snAna mo
dalAda vratavallo
balArinuta prANESaviThThalana
balA gaLisikoLLo | 3 |
***