Showing posts with label ಳಳ- RSS- ಅರಳಿಹುದೋ ಕೆರಳಿಹುದೋ others rss. Show all posts
Showing posts with label ಳಳ- RSS- ಅರಳಿಹುದೋ ಕೆರಳಿಹುದೋ others rss. Show all posts

Friday, 24 December 2021

ಅರಳಿಹುದೋ ಕೆರಳಿಹುದೋ others rss

   

RSS song .

ಅರಳಿಹುದೋ ಕೆರಳಿಹುದೋ

ಹಿಂದೂ ಜಾಗೃತಿ ಮರಳಿಹುದೋ ||ಪ||


ಶತ್ರು ಸಮುದ್ರವ ಕಡಿದು ಮಿತ್ರ ವರ್ಗಗಳು ಬೆಳೆದು

ಶತಮಾನದ ಶೃಂಖಲೆಗಳ ಕಳೆದ

ಹೊಸಮಾನದ ಹಿಂದೂ ಅಲೆ ಭುಗಿಲೋ ||೧||


ಶಾಂತಿ ಸಮನ್ವಯ ಮಂತ್ರವ ಪಠಿಸಿದ ಸಂತರ ಪಾದಕೆ ಮಣಿದು

ವಿಶ್ರಾಂತಿ ಮೈಮನಸಿಗೆ ವಿಕೃತಿಗೆ ಅಂತಿಮ ಕ್ರಿಯೆಗಳು ನಡೆದು

ಮನುಕೋಟಿಗೆ ಸಂಕ್ರಾಂತಿಯ ಬಯಸಿದ ಹೂಂಕೃತಿಯೋ ಝೇಂಕೃತಿಯೋ

ಹಿಂದೂ ಹೃದಯಗಳ ಸಂಸ್ಕೃತಿಯೋ ||೨||


ವಾನರಸೇನೆಯ ಸಂಘಟಿಸಿದ ಶ್ರೀರಾಮನು ತ್ರೇತಾ ಯುಗದಿ

ಗೋಪಾಲಕರನು ತಾ ಪಾಲಿಸಿದನು ಶ್ರೀ ಕೃಷ್ಣನು ದ್ವಾಪರದಿ

ಸಂಘಟನೆಯ ಹರಿಕಾರರ ವಂಶದ ಬಿಂದುಗಳೋ ಬಂಧುಗಳೋ

ಸಂಹತ ಸೋದರ ಹಿಂದುಗಳೋ ||೩||


ಒಳ ಕೀಳರಿಮೆಯ ದಳ್ಳುರಿ ವಿಷವನು ನುಂಗುವ ನಂಜುಂಡನ ಬಲವೋ

ಹೊರದೇಶಿಗರಾಕ್ರಮಣವ ತಡೆಯಲು ಕೈಗೊಂಡಿಹ ಕ್ಷಾತ್ರಿಯ ಛಲವೋ

ಅಂತಃಛ್ಛಿದ್ರವ ಅಂತ್ಯವಗೊಳಿಸುವ ಸಾಧನೆಯೋ ಶೋಧನೆಯೋ

ಶಕ್ತಿಯ ಸೆಲೆ ಆರಾಧನೆಯೋ ||೪||

***

araLihudO keraLihudO

hiMdU jAgRuti maraLihudO ||pa||


Satru samudrava kaDidu mitra vargagaLu beLedu

SatamAnada SRuMKalegaLa kaLeda

hosamAnada hiMdU ale BugilO ||1||


SAMti samanvaya maMtrava paThisida saMtara pAdake maNidu

viSrAMti maimanasige vikRutige aMtima kriyegaLu naDedu

manukOTige saMkrAMtiya bayasida hUMkRutiyO JEMkRutiyO

hiMdU hRudayagaLa saMskRutiyO ||2||


vAnarasEneya saMGaTisida SrIrAmanu trEtaa yugadi

gOpAlakaranu tA pAlisidanu SrI kRuShNanu dvAparadi

saMGaTaneya harikArara vaMSada biMdugaLO baMdhugaLO

saMhata sOdara hiMdugaLO ||3||


oLa kILarimeya daLLuri viShavanu nuMguva naMjuMDana balavO

horadESigarAkramaNava taDeyalu kaigoMDiha kShAtriya CalavO

aMtaHCChidrava aMtyavagoLisuva sAdhaneyO SOdhaneyO

Saktiya sele ArAdhaneyO ||4||

***