Showing posts with label ಯಾವ ಭಯವು ನಮಗೆ ಶಂಕರ ದೇವನೊಲಿದು ಕಡೆಗೆ govinda YAAVA BHAYAVU NAMAGE SHANKARA DEVANOLIDU KADEGE. Show all posts
Showing posts with label ಯಾವ ಭಯವು ನಮಗೆ ಶಂಕರ ದೇವನೊಲಿದು ಕಡೆಗೆ govinda YAAVA BHAYAVU NAMAGE SHANKARA DEVANOLIDU KADEGE. Show all posts

Friday, 3 September 2021

ಯಾವ ಭಯವು ನಮಗೆ ಶಂಕರ ದೇವನೊಲಿದು ಕಡೆಗೆ ankita govinda YAAVA BHAYAVU NAMAGE SHANKARA DEVANOLIDU KADEGE



by ಗೋವಿಂದದಾಸ
ಯಾವ ಭಯವು ನಮಗೆ |ಶಂಕರ ದೇವನೊಲಿದು ಕಡೆಗೆ ಪ

ಸಾವಧಾನದಿ ಸರ್ವಭಕ್ತ ಜನರಕಾವ|ದೇವ ದೇವೇಶ ಸರ್ವೇಶ ನೀನೊಲಿದರೆ ಅಪ

ದುರಿತದ ಭಯವೇನಲೇ | ಶಂಕರ ನಿನ್ನ |ಸ್ಮರಿಸಲು ದೂರವಲೇ |ಮರಣದ ಭಯವೆನೆ | ಅಂತಕಾಂತಕ ನೀನು ||
ಉರಗನ ಭಯವೆನೆ | ಗರಳಕಂಧರನೂ 1

ಚೋರರ ಭಯವೇನೂ | ದಧಿಘೃತ |ಚೋರ ನಿನ್ನಯ ಸಖನೂ ||
ನಾರೀ ಚೋರನ ದೇವ | ಧೀರಕೈರಾತನೀ |ಘೋರರಕ್ಕಸರೆನೆ | ತ್ರಿಪುರಸಂಹಾರ2

ಮೃಗಪಕ್ಷಿ ಭಯವೆನಲೇ |ಸತಿಸುತಸಖ|ಖಗಮೃಗವೇರ್ದರೆಲೇ |ಜಗದೊಡತಿಯು ಲಕ್ಷ್ಮೀ | ಗಗ್ರಜನೆನಿಸಿಹೆ ||
ಭಗಪೀಠನು ಧನ | ಮಾನಾಭಿಮಾನಕೇ 3

ವಸನಕ್ಕೆ ಚರ್ಮಾಂಬರನೂ |ಸಂಸಾರವೆಂಬ ವ್ಯಸನಕೆ ದಿಗಂಬರನೂ ||
ತೃಷೆಗೆ ಗಂಗಾಧರ | ಅಶನಕ್ಕೆ ಬಿಕ್ಷುಕನೀ |ಅಂಗ ಶೃಂಗಾರಕೆ | ಭಸ್ಮಲೇಪನನೂ 4

ಪೊಗಳಲಳವೇ ನಿನ್ನಾ | ಮಹೇಶ್ವರ |ಜಗದಿ ಭಕ್ತರ ಸಂಪನ್ನಾ ||
ಭೃಗುಲಾಂಛನಧರ ಗೋವಿಂದದಾಸನ |ಹಗಲಿರುಳೆನ್ನದೆಪೊರೆಯೋ ಮಹಾದೇವ 5
*******