...
ಪ್ರೀತಿಯ ಮಾಡನೀತಿಯ ಶುಕವಾಣಿ ಪ್ರೀತಿಯ ಮಾಡ ಚಾತುರ್ಯದಲಿಮುದ್ದು ಮಾತಿನ ಮಾಧುರಿ ಪ್ರೀತಿಯ ಮಾಡು ಪ.
ದೇವಿ ರುಕ್ಮಿಣಿ ನಮ್ಮಮ್ಮ ದೇವಕಿ ಸರಿಯಮ್ಮನಾಕುಂದು ನಿನ್ನ ನುಡಿದೆನನಾಕುಂದು ನಿನ್ನ ನುಡಿದ ಅಪರಾಧವ ಭಾವದೊಳಿಡದೆ ಕರುಣಿಸು ಪ್ರೀತಿಯಮಾಡು1
ಅತ್ತಿಗೆ ನೀನಮ್ಮ ಹೆತ್ತತಾಯಿ ಸರಿಯಮ್ಮಅತ್ಯಂತ ನಿನಗೆ ನುಡಿದೆವ ಅತ್ಯಂತ ನಿನಗೆ ನುಡಿದ ಅಪರಾಧವಚಿತ್ತದೊಳಿಡದೆ ಕರುಣಿಸು ಪ್ರೀತಿಯಮಾಡು2
ಸುಗುಣಸಹಕಾರಿಯೆ ನಿಗಮಾಭಿಮಾನಿಯೆ ವಿಗಡ ಬುದ್ಧಿಯಿಂದ ನುಡಿದೆವವಿಗಡ ಬುದ್ಧಿಯಿಂದ ನುಡಿದೆವ ಅತ್ತಿಗೆ ನಿನ್ನಮಗಳು ಜಾನ್ಹವಿಯ ಸರಿಯಮ್ಮ ಪ್ರೀತಿಯ ಮಾಡು3
ಸತ್ಯಭಾವೆ ನಮ್ಮ ಅತಿ ವಿನೋದವಮತ್ತೊಂದು ನೀನು ತಿಳಿಯದೆ ಮತ್ತೊಂದು ನೀನು ತಿಳಿಯದೆ ಅತ್ಯಂತ ಎನಮ್ಯಾಲೆ ಕರುಣವ ಇರಲೆಮ್ಮ ಪ್ರೀತಿಯ ಮಾಡು4
ಸರಸಿಜಮುಖಿ ನಮ್ಮ ಹರುಷ ವಿನೋದವ ವಿರಸ ಮಾಡದಲೆಮನದೊಳು ವಿರಸ ಮಾಡದಲೆ ಮನದೊಳು ರಾಮೇಶನ ಅರಸಿ ನೀನಮಗೆ ದಯಮಾಡು ಪ್ರೀತಿಯ ಮಾಡು5
****