Showing posts with label ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ hayavadana. Show all posts
Showing posts with label ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ hayavadana. Show all posts

Wednesday, 1 September 2021

ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ankita hayavadana

 ..

ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ

ನೂಕು ಭವದ ಬೇಸರ ದುಷ್ಕರ್ಮವನೀಗ ಪ.


ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು

ಬಾಧಿಪ ಖಳನುದರ ಸೀಳ್ದಗೆ ಸರಿದೋರು

ಪಾದನಖದಿ ಬೊಮ್ಮಾಂಡವನೊಡೆದನ ಸಾರು

ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1


ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು

ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು

ಖ್ಯಾತ ದಿಗಂಬರದೇವನ ಕುಶಲವ ನೋಡು

ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2


ಅನುದಿನ ಪೊಕ್ಕು ನೀ ಸಾರಿ [ಸಜ್ಜನರೆಡೆಗೆ]

ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ

ಕನಸಿನೊಳಾದರು ಪೋಗದಿರಧಮರ ಬಳಿಗೆ ಗು-

ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3

***