Wednesday, 1 September 2021

ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ankita hayavadana

 ..

ರಾಗ –  :  ತಾಳ –


ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ

ನೂಕು ಭವದ ಬೇಸರ ದುಷ್ಕರ್ಮವನೀಗ ll ಪ ll


ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು 

ಬಾಧಿಪ ಖಳನುದರ ಸೀಳ್ದಗೆ ಸರಿದೋರು

ಪಾದನಖದಿ ಬೊಮ್ಮಾಂಡವನೊಡೆದನ ಸಾರು

ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು ll ೧ ll


ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು 

ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು 

ಖ್ಯಾತ ದಿಗಂಬರದೇವನ ಕುಶಲವ ನೋಡು

ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು ll ೨ ll


ಅನುದಿನ ಪೊಕ್ಕು ನೀ ಸಾರಿ ಸಜ್ಜನರೆಡೆಗೆ

ಮನೆಮನೆವಾರ್ತೆಯ ಬಿಟ್ಟು ಧೆನಿಸುವುದು ಗಳಿಗೆ

ಕನಸಿನೊಳಾದರು ಪೋಗದಿರಧಮರ ಬಳಿಗೆ ಗು

ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ ll ೩ ll

***#

ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ

ನೂಕು ಭವದ ಬೇಸರ ದುಷ್ಕರ್ಮವನೀಗ ಪ.


ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು

ಬಾಧಿಪ ಖಳನುದರ ಸೀಳ್ದಗೆ ಸರಿದೋರು

ಪಾದನಖದಿ ಬೊಮ್ಮಾಂಡವನೊಡೆದನ ಸಾರು

ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1


ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು

ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು

ಖ್ಯಾತ ದಿಗಂಬರದೇವನ ಕುಶಲವ ನೋಡು

ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2


ಅನುದಿನ ಪೊಕ್ಕು ನೀ ಸಾರಿ [ಸಜ್ಜನರೆಡೆಗೆ]

ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ

ಕನಸಿನೊಳಾದರು ಪೋಗದಿರಧಮರ ಬಳಿಗೆ ಗು-

ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3

***


No comments:

Post a Comment