ಸರಸಿಜನಾಭನೆ ಸೆರಗೊಡ್ಡಿ ಬೇಡುವೆ
ದುರಿತಗಳೆಲ್ಲವ ತರಿದು ವರವಿತ್ತು ಕರುಣಿಸೋ ||ಪ||
ಕರುಣಾಸಾಗರ ನಿನ್ನ ಚರಣವ ನಂಬಿದೆ
ಪರಮ ಪಾವನ ನಿನ್ನ ಶರಣನ ಪೊರೆಯೆಂದು ||೧||
ಈಶವಿನುತ ನಿನ್ನ ವಾಸಿಯ ಪೊಗಳುವೆ
ದಾಸ ಎಂದೆನ್ನನು ಗಾಸಿಮಾಡದೆ ಕಾಯೊ ||೨||
ಬಾರಿಬಾರಿಗೆ ಬರುವ ದಾರಿದ್ರ್ಯ ದುಃಖವ
ದೂರಗೈಸುವಂಥ ದಾರಿ ತೋರಿಸೆಂದು ||೩||
ಕಂತುಪಿತನೆ ಎನ್ನ ಅಂತರಂಗದಿ ನಿನ್ನ
ಸಂತತ ನೆನೆವಂತೆ ಚಿಂತನೆ ನಿಲಿಸೆಂದು ||೪||
ಮಂಗಳಾತ್ಮಕನೆ ಶ್ರೀರಂಗವಿಟ್ಠಲ ಭು-
ಜಂಗಶಯನ ನಿನ್ನ ಹಿಂಗದೆ ಭಜಿಪೆನು ||೫||
***
ಕಾಂಬೋಧಿ ರಾಗ ಆದಿತಾಳ (raga, taala may differ in audio)