Showing posts with label ಶ್ರೀಕಾಂತ ವಿಠಲ ತವ ಸೇವಕನಾಡಿವನ uragadrivasa vittala srikanta vittala dasa stutih. Show all posts
Showing posts with label ಶ್ರೀಕಾಂತ ವಿಠಲ ತವ ಸೇವಕನಾಡಿವನ uragadrivasa vittala srikanta vittala dasa stutih. Show all posts

Saturday, 1 May 2021

ಶ್ರೀಕಾಂತ ವಿಠಲ ತವ ಸೇವಕನಾಡಿವನ ankita uragadrivasa vittala srikanta vittala dasa stutih

 " ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಗಳಿಗೆ ನೀಡಿದ ಅಂಕಿತ ಪದ " by uragadrivasa vittala. [ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಯವರು  -  ಶ್ರೀಮತಿ ಸರಸ್ವತೀ ವಟ್ಟಂ ಅಕ್ಕನವರ ಮಾವಂದಿರು ]


ಶ್ರೀಕಾಂತ ವಿಠಲ ತವ -

ಸೇವಕನಾಡಿವನ ।

ನೀ ಕಾಪಾಡಿ ಸಲಹೋ 

ಸನ್ಮತಿಯನಿತ್ತು ।। ಪಲ್ಲವಿ ।।

ವಾಕು ಲಾಲಿಸು ಈ ಬಾಲ 

ನಿನ್ನವನೆಂದು । ನಿ ।

ರಾಕರಿಸದೆ ನಿನ್ನ ಭಕುತಿ ।

ಭಾಗ್ಯವನಿತ್ತು ।। ಅ ಪ ।।

ಆಯುರಾರೋಗ್ಯ 

ಸದ್ವಿದ್ಯ । ವಾ ।

ಕ್ಕಾಯ ಮನದ ಧ್ಯಾನ 

ವೃದ್ಧಿಗೈಸಿ ।

ವಾಯು ಮತಾಗಮ -

ತತ್ತ್ವದಾಯವ ತಿಳಿಸು ।

ಜೀಯ ನಿನ್ನ ಸೇವೆಯ-

ನಿತ್ತು ಕಾಯೋ ।। ಚರಣ ।।

ಮಾತಾ ಪಿತೃ ಭ್ರಾತೃ 

ಬಂಧು ಭಾಗನಿಹರಲ್ಲಿಹ । ಶ್ರೀ ।

ಪತಿ ವಿಭೂತಿಗಳ ನೆನೆದು ।

ಜಿತ ಮನದಿ ಪ್ರೀತಿ -

ವಿಶ್ವಾಸದಲಿ ।

ಸತತ ಶ್ರೀ ಹರಿ ನಿನ್ನ 

ಬಿಂಬ ಕ್ರಿಯೆಗಳನೆ 

ಅರುಹೋ ।। ಚರಣ ।।

ಪರ ಭಾಷೆ ಪರ ಸೇವೆ 

ಪರಮಾರ್ಥ ಪರವಾಗಿ ।

ಪರಿ ಪರಿಯಲಿ 

ವೃದ್ಧಿಯಾಗುತ್ತ ।

ಸುರರೊಡೆಯ ಉರಗಾದ್ರಿ -

ವಾಸ ವಿಠಲಾಭಿನ್ನ ।

ಶ್ರೀಕಾಂತ ವಿಠಲನ 

ಹೃತ್ಪಂಕಜದಿ 

ತೋರೋ ।। ಚರಣ ।।

***