" ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಗಳಿಗೆ ನೀಡಿದ ಅಂಕಿತ ಪದ " by uragadrivasa vittala. [ ಪರಮಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸಮೂರ್ತಿಯವರು - ಶ್ರೀಮತಿ ಸರಸ್ವತೀ ವಟ್ಟಂ ಅಕ್ಕನವರ ಮಾವಂದಿರು ]
ಶ್ರೀಕಾಂತ ವಿಠಲ ತವ -
ಸೇವಕನಾಡಿವನ ।
ನೀ ಕಾಪಾಡಿ ಸಲಹೋ
ಸನ್ಮತಿಯನಿತ್ತು ।। ಪಲ್ಲವಿ ।।
ವಾಕು ಲಾಲಿಸು ಈ ಬಾಲ
ನಿನ್ನವನೆಂದು । ನಿ ।
ರಾಕರಿಸದೆ ನಿನ್ನ ಭಕುತಿ ।
ಭಾಗ್ಯವನಿತ್ತು ।। ಅ ಪ ।।
ಆಯುರಾರೋಗ್ಯ
ಸದ್ವಿದ್ಯ । ವಾ ।
ಕ್ಕಾಯ ಮನದ ಧ್ಯಾನ
ವೃದ್ಧಿಗೈಸಿ ।
ವಾಯು ಮತಾಗಮ -
ತತ್ತ್ವದಾಯವ ತಿಳಿಸು ।
ಜೀಯ ನಿನ್ನ ಸೇವೆಯ-
ನಿತ್ತು ಕಾಯೋ ।। ಚರಣ ।।
ಮಾತಾ ಪಿತೃ ಭ್ರಾತೃ
ಬಂಧು ಭಾಗನಿಹರಲ್ಲಿಹ । ಶ್ರೀ ।
ಪತಿ ವಿಭೂತಿಗಳ ನೆನೆದು ।
ಜಿತ ಮನದಿ ಪ್ರೀತಿ -
ವಿಶ್ವಾಸದಲಿ ।
ಸತತ ಶ್ರೀ ಹರಿ ನಿನ್ನ
ಬಿಂಬ ಕ್ರಿಯೆಗಳನೆ
ಅರುಹೋ ।। ಚರಣ ।।
ಪರ ಭಾಷೆ ಪರ ಸೇವೆ
ಪರಮಾರ್ಥ ಪರವಾಗಿ ।
ಪರಿ ಪರಿಯಲಿ
ವೃದ್ಧಿಯಾಗುತ್ತ ।
ಸುರರೊಡೆಯ ಉರಗಾದ್ರಿ -
ವಾಸ ವಿಠಲಾಭಿನ್ನ ।
ಶ್ರೀಕಾಂತ ವಿಠಲನ
ಹೃತ್ಪಂಕಜದಿ
ತೋರೋ ।। ಚರಣ ।।
***
No comments:
Post a Comment