Showing posts with label ನಾರಾಯಣ ನಾರಾಯಣ ನಾರಾಯಣ ನಳಿನೋದರ hayavadana NARAYANA NARAYANA NARAYANA NALINODARA. Show all posts
Showing posts with label ನಾರಾಯಣ ನಾರಾಯಣ ನಾರಾಯಣ ನಳಿನೋದರ hayavadana NARAYANA NARAYANA NARAYANA NALINODARA. Show all posts

Saturday, 11 December 2021

ನಾರಾಯಣ ನಾರಾಯಣ ನಾರಾಯಣ ನಳಿನೋದರ ankita hayavadana NARAYANA NARAYANA NARAYANA NALINODARA

ನಾರಾಯಣ ನಾರಾಯಣ ನಾರಾಯಣ ||ಪ||

ನಳಿನೋದರ ನಾರದಪ್ರಿಯ ನಾಮ
ಜಯ ನಾರಾಯಣ ನರಕಾಂತಕ||ಅ.ಪ||

ಸುರಸಂಚಯ ಸುಖಕಾರಣ
ದಿತಿಜಾಂತಕ ದೀನಶರಣ|
ಪರತ ಪರ ಪಾಂಡವಪ್ರಿಯ
ಪರಿಪೂರ್ಣ ಜಯ||

ಅಘಕುಲವನದಾವಾನಲ
ಅಗಣಿತ ಗುಣಗಣ ನಿರ್ಮಲ|
ತ್ರಿಗುಣಾತೀತ ತ್ರಿಭುವನ
ತ್ರಿದಶೇಶ್ವರವಂದ್ಯ ಜಯ||

ಅತಿ ಮೋಹನಚರಿತ ನಮೋ
ಅತಿ ಸದ್ಗುಣಭರಿತ ನಮೋ|
ಹತಕಲ್ಮಷ ಹಯವದನ
ಹರಿ ಹಯರಿಪುಹರಣ ಜಯ||
******