ಭೈರವಿ ರಾಗ ತ್ರಿತಾಳ
ಬಾರಯ್ಯಾ ಭಕ್ತವತ್ಸಲಾ
ಬಾರೋ ಶ್ರೀಹರಿಗೋಪಾಲಾ
ಸಿರಿ ಸುಖಲೋಲಾ ||ಪ||
ಸಾಮಗಾಯನ ಪ್ರೀಯಾ
ಸಮಸ್ತ ಲೋಕದ ಶ್ರೇಯಾ
ನೇಮಿಸಿ ಬೀರೋ ಉದಯಾ
ಸ್ವಾಮೀ ನಮ್ಮಯ್ಯಾ ||೧||
ಅನಾಥರನುಕೂಲಾ
ಮುನಿಜನ ಪ್ರತಿಪಾಲಾ
ಘನಸುಖದ ಕಲ್ಲೋಳಾ
ದೀನದಯಾಳಾ ||೨||
ಮನಮಂದಿರದೊಳು
ಅನುವಾಗಿ ಬಾಳು
ದೀನ ಮಹಿಪತಿಗಾಳು
ಘನವಾಗಿ ಕೇಳು ||೩||
********
ಬಾರಯ್ಯಾ ಭಕ್ತವತ್ಸಲಾ
ಬಾರೋ ಶ್ರೀಹರಿಗೋಪಾಲಾ
ಸಿರಿ ಸುಖಲೋಲಾ ||ಪ||
ಸಾಮಗಾಯನ ಪ್ರೀಯಾ
ಸಮಸ್ತ ಲೋಕದ ಶ್ರೇಯಾ
ನೇಮಿಸಿ ಬೀರೋ ಉದಯಾ
ಸ್ವಾಮೀ ನಮ್ಮಯ್ಯಾ ||೧||
ಅನಾಥರನುಕೂಲಾ
ಮುನಿಜನ ಪ್ರತಿಪಾಲಾ
ಘನಸುಖದ ಕಲ್ಲೋಳಾ
ದೀನದಯಾಳಾ ||೨||
ಮನಮಂದಿರದೊಳು
ಅನುವಾಗಿ ಬಾಳು
ದೀನ ಮಹಿಪತಿಗಾಳು
ಘನವಾಗಿ ಕೇಳು ||೩||
********