Showing posts with label ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತ uragadrivasa vittala. Show all posts
Showing posts with label ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತ uragadrivasa vittala. Show all posts

Monday, 2 August 2021

ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತ ankita uragadrivasa vittala

 ತ್ತಾತ್ವಿಕವಿವೇಚನೆ

ಏಕ ಪಂಚಾಶದ್ವರ್ಣವಾಚ್ಯ

ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ


ಈ ಕಾಯ ಕಾರ್ಯಕಾರಣವನನುಸರಿಸಿ

ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ


ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು

ನಿಜರೂಪ ಉಗ್ರ ಊರ್ಜ ಕರ್ಣದೊಳು

ನಿಜ ಋತುಂಬರ ಋಘನಾಸದಲ್ಲಿ

ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ 1

ಏಕಾತ್ಮ ಐರಸ ಓಷ್ಠದಲಿ ನೀನಿದ್ದು

ಪೊರೆಯಯ್ಯ ಓಜೋಬೃತೌರಸ

ಜೋಕೆಯಿಂದಲಿ ದಂತ ಪಂಕ್ತಿಯಲ್ಲಿಹೆ ದೇವ

ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ 2

ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್

ಅಪರಿಚ್ಛಿನ್ನನೇ ನೀನು ಸಂಧಿಗಳಲಿ

ಸುಫಲದಾತನೆ ಙಸಾರನಾಮದಲಿದ್ದು

ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ 3

ಚಾರ್ವಾಂಗ ಛಂದೋಗಮ್ಯ ಜನಾದರ್Àನ

ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ

ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ

ಞಮನಾಮದಲಿ ನೆಲೆಸಿರುವೆ 4

ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ

ಟಂಕ ರಹಿತ ದಕ್ಷಿಣ ಪಾದದಲ್ಲಿ

ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ

ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ 5

ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ

ಬಲಿ ಭಗನಾಮ ಪೃಷ್ಟ ಗುಹ್ಯದಲಿ

ನಿರುತ ಮನ ವರ್ಣವಾಚ್ಯ ನೆನಿಸಿಹೆ

ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ6

ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ

ಚರ್ಮ ವರಹ ರುಧಿರ ಶಾಂತಸಂವಿತ್ ಮಾಂಸದಲ್ಲಿ

ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು

ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ 7

ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ

ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ

ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು

ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ 8

ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ

ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ

ಪರಿಪರಿ ಭೇರಿ ಮರ್ಮದಿ ಶಬ್ದಗಳು

ನಿರುತ ನಿನ್ನನುದಿನದಿ ಪೊಗಳುತಿಹವೋ 9

ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ

ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ

ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ

ಉರಗಾದ್ರಿವಾಸ ವಿಠಲ ಜಗದೀಶ10

****