ಶ್ರೀ ವಾದಿರಾಜರ ಕೃತಿ
ರಾಗ : ಪೂರ್ವಿಕಲ್ಯಾಣಿ ತಾಳ : ಮಿಶ್ರಛಾಪು
ಕೊಲ್ಲುಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ॥ಪ॥
ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ॥ಅ.ಪ॥
ಎಲ್ಲಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತ್ತಿದ್ದರು
ಬಲ್ಲೆನವರ ಕೊಳ್ಳೆಕಾರರ ಹಲ್ಲ ಕೀಳದೆ ನಿಲ್ಲರು ॥೧॥
ಒಳ್ಳೆ ಮಾತನಾಡಲವರು ಕೋಲಾಹಲದಿ ಬೈವರು
ಗೆಲುವ ಶಕ್ತಿ ಇಲ್ಲ ನಮಗೆ ಬಲ್ಲೆ ಮಧ್ವರಿಗೊಲಿದನೆ ॥೨॥
ಕಳ್ಳತನವ ಒಲ್ಲೆವೆಂಬರು ಮುಳ್ಳು ಮೊನೆಯಂತಿಪ್ಪರು
ಚೆಲುವ ಹಯವದನ ಅವರ ಕೊಲ್ಲು ನಮ್ಮ ಗೆಲಿಸು ॥೩॥
*******