ಬಾರೋ ಗೋಪಿಯ ಬಾಲಾ ಮಾನಸದೊಳುತೋರಿಸೋ ಮುಖಕಮಲಾ ಪ
ಸೇರಿಸೊ ನಿನ್ನ ಪದ ಸಾರಸಯುಗಳ-ಪಾರ ಸದ್ಗುಣ ಶೀಲ ಅಪ್ಪಯ್ಯ ಕೃಷ್ಣಅ.ಪ.
ವಕ್ತ್ರಲಂಬಿತವಾಲಾ ಮಣಿಮಯ ಚಿತ್ರಶೋಭಿತ ಭಾಲಾರತ್ನಕುಂಡಲ ನವಮೋಕ್ತಿಕ ಮಾಲಾ ಭೃತ್ಯಭಾಷಿತ ಪಾಲಾ 1
ಕಂಕಣಾಂಗದ ಭೂಷಾ ಮಣಿಮಯಾಲಂಕೃತ ಶುಭ ವೇಷಾಶಂಕರಮುಖ ಸುರಾತಂತಂ ವಿನಾಶ ಕಿಂಕರ ಜನ ಘೋಷ 2
ವೇದವನಿತ್ತವನೇ ವಾರಿಧಿಯೊಳು ಭೂಧರ ಪೊತ್ತವನೆಮೇದಿನಿಯನು ಕೋರಿಲ್ಯಾ ಧರಿಸಿದನೇ ನರ ಮೃಗದಾ ಮೊಗದವನೆ 3
ಧಾರುಣಿ ಅಳೆದವನೆ ಭಾರ್ಗವ ಸೀತಾ ಚೋರನ ಗೆಲಿದವನೆ ನಾರಿಮೋಹನ ಜಿನಾಚಾರ್ಯ ಸುತನೆ ಘೋರ ಮ್ಲೇಂಛರ ಹರನೇ 4
ಮಂದಹಾಸನ ಮುಖನಾ ಸುರವರವೃಂದ ಶೋಭಿತ ಸದನಾಇಂದಿರೇಶನ ಯದುನಂದನ ಕರುಣಾಸಿಂಧು ಸಾಮಜ ಶರಣಾ 5
****