kruti: tandevaradagopala vittala (ಪ್ರಹ್ಲಾದಗೌಡರು)
ನಿಂದಾಳೋ ಸತಿ ಸರಸದಿ ಶಾಲೆಯೊಳು ಬಂದು ಪ
ಪಿತನಿಂದಲಿ ಪತಿನಿಂದ್ಯವ ಕೇಳಿದನೆಂದು ಬಂದು ಅ.ಪ.
ಘುಡು ಘಡಿಸುತ ಶಿಡಿಲಬ್ಬರದಂದದಿ ಕುಂಡದ ಧಡಿಗೆ ಬಿಡುಬಿಡುತಲಿ ಕಣ್ಣೀರಿಡುತಲಿ ಕೆಂಡದಿ ಧುಮುಕಲುಜಡೆಧರ ಕೇಳಿದಾಕ್ಷಣ ಜಡೆ ಅಪ್ಪಳಿಸಲು ಮೇದಿನಿಗೆ ಸಂದುದಿತ ಸದಾಶಿವನೆ ಬಂದು ಭಂಜಿಸಲು ಮತ್ತೆಮೇಲು ಬಂದು 1
ಮಾವನ ಶಿರವಳಿದಾ ಮತ್ತೆ ಮಾವನಿಂದಲಿ ತುತಿಸಿಕೊಂಡ ಮಂದಜಾಸನ ಬಂದು ಬಹುಪರಿ ಪೇಳಿದಾಮಂದ ಜನರ ಪೊರೆದಾ ಮಾರನಯ್ಯನಾ ಕರುಣವ ಪಡೆದಾಮತ್ತೆ ಮಾರನ ಮದ ಮುರಿದಾ ಮಾರನ ಬದುಕಿಸಿಮಾರಿಗೆ ವರವಿತ್ತು ನಾರಿಗೆ ತೋರಿಸೆ ಬಂದು2
ನಸುನಗುತಲಿ ಬಸವನು ಭೃಗು ಋಷಿಗಳ ಮೀಸೆಗಳ್ಳುದಾ ಬಸುಮಾದರ ಬಹುಪರಿಯಾಗದ ಬಸುಮಗೈದಾಳಳಿದಾ ಭಾರ್ಯಳ ಮೊರೆಕೇಳಿ ಭಾರವನಿಳುಹಿಪ ಪರಭಾರೆಪುರಕೆ ಪೋದಾಭಾರತೀಶ ಪಿತ ತಂದೆವರದಗೋಪಾಲವಿಠಲನಭಜಿಸುತ ಬಂದು 3
***