..
ಶ್ರೀ ಮಧ್ವಾಚಾರ್ಯರು
ಮಧ್ವೇಶಾರ್ಪಣಮಸ್ತು ಮಹಾಪ್ರಭು ಮಧ್ವೇಶಾರ್ಪಣಮಸ್ತು ಪ
ಎದ್ದು ಕೂತು ಮಲಗೆದ್ದು ಮಾಡುವ ಕರ್ಮಮಧ್ವೇಶಾರ್ಪಣಮಸ್ತು ಅ.ಪ.
ಹುಟ್ಟಿದಾರಭ್ಯದಿ ಅಷ್ಟು ಮಾಡಿದ ಕರ್ಮ ಮಧ್ವೇಶಾರ್ಪಣಮಸ್ತುದುಷ್ಟರಾಡುತಿಹ ಕೆಟ್ಟ ನುಡಿಗಳು ಮಧ್ವೇಶಾರ್ಪಣಮಸ್ತುಮೆಟ್ಟಿ ಹೆಜ್ಜೆ ಇಟ್ಟದಾಡುವುದು ಮಧ್ವೇಶಾರ್ಪಣಮಸ್ತುಶಿಟ್ಟಿಲಿ ಜನರಿಗೆ ನಿಷ್ಠುರಾಡುವುದು ಮಧ್ವೇಶಾರ್ಪಣಮಸ್ತು 1
ಬಾಲೇರ ಕೂಡಿ ವಿಲಾಸದ ಮಾತುಗಳು ಮಧ್ವೇಶಾರ್ಪಣಮಸ್ತುಕಾಲಕಾಲದಿ ನಾಲಿಗೆ ರುಚಿಸುವುದು ಮಧ್ವೇಶಾರ್ಪಣಮಸ್ತುಬಾಲಕರುಗಳನು ಲಾಲನೆ ಮಾಳ್ಪದು ಮಧ್ವೇಶಾರ್ಪಣಮಸ್ತುಶ್ರೀ ಲಕುಮಿಪತಿಯ ಓಲಗ ಮಾಳ್ಪದು ಮಧ್ವೇಶಾರ್ಪಣಮಸ್ತು
ನಾಸಿಕದಿಂದಲಿ ಶ್ವಾಸ ಬಿಡುವುದು ಮಧ್ವೇಶಾರ್ಪಣಮಸ್ತುಲೇಸು ದೋರಿ ಬಹು ತೋಷಪಡುವುದು ಮಧ್ವೇಶಾರ್ಪಣಮಸ್ತುಬ್ಯಾಸರದಿಂದಲಿ ಕ್ಲೇಶ ಬಡುವುದು ಮಧ್ವೇಶಾರ್ಪಣಮಸ್ತುಹೇಸಿಕೆ ವಿಷಯಗಳಾಶೆ ಮಾಡುವುದು ಮಧ್ವೇಶಾರ್ಪಣಮಸ್ತು 3
ಬಗೆ ಬಗೆ ವಸ್ತ್ರಗಳಗಲದೆ ಹೊದಿವುದು ಮಧ್ವೇಶಾರ್ಪಣಮಸ್ತುಝಗ ಝಗಿಸುವ ಹೊಸ ನಗಗಳನಿಡುವುದು ಮಧ್ವೇಶಾರ್ಪಣಮಸ್ತುಸೊಗಸಿಂದುತ್ತರಗಳ ಸೇವಿಸುವುದು ಮಧ್ವೇಶಾರ್ಪಣಮಸ್ತುಹಗಲಿರುಳಲಿ ಮಾಳ್ಪಗಣಿತ ಕರ್ಮವು ಮಧ್ವೇಶಾರ್ಪಣಮಸ್ತು 4
ರಮಣಿಯರಿಂದಲಿ ರಮಣ ಮಾಡುವುದು ಮಧ್ವೇಶಾರ್ಪಣಮಸ್ತುಕ್ರಮದಿಂ ದಶೇಂದ್ರಿಯ ಕರ್ಮಗಳೆಲ್ಲವು ಮಧ್ವೇಶಾರ್ಪಣಮಸ್ತುಭ್ರಮಿಸಿ ಗುರುಗಳ ಮನ ಸ್ತೋಷಿಸುವುದು ಮಧ್ವೇಶಾರ್ಪಣಮಸ್ತುರಮಾಪತಿ ವಿಠಲನ ಮನದಿ ಧ್ಯಾನಿಸುವುದುಮಧ್ವೇಶಾರ್ಪಣಮಸ್ತು 5
****