Showing posts with label ಕಲ್ಲಿನಿಂದ ಸರ್ವ ಫಲ ಬಾಹುದೊ vijaya vittala. Show all posts
Showing posts with label ಕಲ್ಲಿನಿಂದ ಸರ್ವ ಫಲ ಬಾಹುದೊ vijaya vittala. Show all posts

Thursday, 16 December 2021

ಕಲ್ಲಿನಿಂದ ಸರ್ವ ಫಲ ಬಾಹುದೊ ankita vijaya vittala KALLININDA SARVA PHALA BAAHUDE KAIVALYA TORUVUDO



ಕಲ್ಲಿನಿಂದ ಸರ್ವ ಫಲ ಬಾಹುದೊ | ಪ

ಕೈವಲ್ಯ ತೋರುವುದೊ ಅ.ಪ

ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು |
ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು |
ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು |
ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು1

ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ |
ಮೂರ್ತಿ ಮಂತಾಹುದು |
ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು |
ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು2

ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ |
ಕಲ್ಲು ಮನಸನು ಬಿಟ್ಟು ಪೂಜೆಮಾಡಿ |
ಸಿರಿ ವಿಜಯವಿಠ್ಠಲ ಒಳ್ಳೆ |
ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ 3
***

pallavi


kallininda sarva phala bahudu


anupallavi


kallu bhajesedare kaivalya toruvadu


caraNam 1


kallu kade utteralu amrutave puttetu kallu yattalu maleyolellaru uledaru

kallu haripadavanu soke hennaetu kallu lankege marga cennage shobhesetu


caraNam 2


kallenolage deva vadamUde kanesuva kallu koreyalu murti mantahudo

kallu devara gudige garuDa gabhave Aitu kallu kotyanu kotige beleyaitu


caraNam 3


kallendu pekshesade kAla kAlade nemma kallu manasannu bettu pUjeya mADe

kallenolageddu siri vijayaviThala valle kallu padaveya kottu satata palipano

***