Showing posts with label ಅಂತಃಕರಣದ ಧೊರೆಯೇ ಮಂತ್ರಾಲಯದ ಗುರುವೇ parthasarathi vittala. Show all posts
Showing posts with label ಅಂತಃಕರಣದ ಧೊರೆಯೇ ಮಂತ್ರಾಲಯದ ಗುರುವೇ parthasarathi vittala. Show all posts

Saturday, 1 May 2021

ಅಂತಃಕರಣದ ಧೊರೆಯೇ ಮಂತ್ರಾಲಯದ ಗುರುವೇ ankita parthasarathi vittala

 ARALUMALLIGE PARTHASARATHI

ರಾಗ : ಮಧ್ಯಮಾವತಿ ತಾಳ : ಆದಿ

ಅಂತಃಕರಣದ ಧೊರೆಯೇ ।

ಮಂತ್ರಾಲಯದ ಗುರುವೇ ।। ಪಲ್ಲವಿ ।।


ಸಂತ ಜನರ ಹೃದಯ ನಿವಾಸಿ ।

ಧೀಮಂತ ಜನರ ಮನದಲಿ ವಾಸಿ ।

ಅಂತರಂಗದಿ ಸೇವಿಪ ಜನರಿಗೆ ತಾವು ।

ಒಲಿದು ಇಷ್ಟಾರ್ಥಗಳನೆ ನೀಡುವಂಥ ।। ಚರಣ ।।


ಆತ್ಮ ಜನರ ಆಧ್ಯಾತ್ಮ ಸಿದ್ಧಿ ।

ಭಕ್ತಿ ಸಾಧನೆಗೆ ಲೋಕ ಪ್ರಸಿದ್ಧಿ ।

ನಂಬಿದ ಜನರಿಗೆ ಬಹು ಸಮೃದ್ಧಿ ।। ಚರಣ ।।


ನಾದ ತರಂಗದ ಅನನ್ಯ ವೈಣಿಕ ।

ಶಾಸ್ತ್ರ ಸಾರಗಳ ಅದ್ಭುತ ವೈದಿಕ ।

ಪಾರ್ಥಸಾರಥಿವಿಠ್ಠಲನ ಪ್ರೀತಿಯ ।

ಸುಂದರ ಮಂತ್ರಾಲಯ ಪ್ರಭುವೇ ನೀ ।। ಚರಣ ।।
****