..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಏನು ಮಾಡಿದರೆ ನಿನ್ನ ಕಾಣುವೋ ಸನ್ಮಾರ್ಗ ದೊರೆವುದೊ
ಮಾನನಿಧಿ ಶ್ರೀ ವೇಣುಗೋಪಾಲ ಇನ್ನಾದರು ತೋರಿಸೊ ಪ
ಉರಗನ ಪಿಡಿಯಲೇ ಹರಿಯ ಪೂಜಿಸಿದ ಕರಗಳಿಂದಲಿ ಶ್ರೀ
ಹರಿ ನಿನ್ನ ಕರೆದು ಕೊಂಡಾಡದದುರುಳಜಿಹ್ವೆಯಕೊಯ್ಯಲೆ 1
ವರ ತೀರ್ಥಕ್ಷೇತ್ರಕೆ ಹೊರಡದ ಕಾಲ್ಗಳ ಉರಿವೊ
ಜ್ವಾಲೆಯೊಳಿಡಲೆ
ಹರಿಕಥೆಕೇಳದಾಎರಡುಕರ್ಣಗಳಿಗೆಮಿರಿ
ಮೀರಿಕೆಂಡತುಂಬಲೆ 2
ನಿನ್ನ ನೋಡದ ನಯನಕ್ಕೆ ಮಣ್ಣನೆ ತುಂಬಲೆ
ನರಸಿಂಗನ ಸ್ಮರಿಸದ
ಮನವನು ಏನು ಮಾಡಲೊ ವಿಜಯ ರಾಮಚಂದ್ರವಿಠಲ 3
***