Friday 6 August 2021

ಏನು ಮಾಡಿದರೆ ನಿನ್ನ ಕಾಣುವೋ ಸನ್ಮಾರ್ಗ ದೊರೆವುದೊ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಏನು ಮಾಡಿದರೆ ನಿನ್ನ ಕಾಣುವೋ ಸನ್ಮಾರ್ಗ ದೊರೆವುದೊ

ಮಾನನಿಧಿ ಶ್ರೀ ವೇಣುಗೋಪಾಲ ಇನ್ನಾದರು ತೋರಿಸೊ ಪ


ಉರಗನ ಪಿಡಿಯಲೇ ಹರಿಯ ಪೂಜಿಸಿದ ಕರಗಳಿಂದಲಿ ಶ್ರೀ

ಹರಿ ನಿನ್ನ ಕರೆದು ಕೊಂಡಾಡದದುರುಳಜಿಹ್ವೆಯಕೊಯ್ಯಲೆ 1


ವರ ತೀರ್ಥಕ್ಷೇತ್ರಕೆ ಹೊರಡದ ಕಾಲ್ಗಳ ಉರಿವೊ

ಜ್ವಾಲೆಯೊಳಿಡಲೆ

ಹರಿಕಥೆಕೇಳದಾಎರಡುಕರ್ಣಗಳಿಗೆಮಿರಿ

ಮೀರಿಕೆಂಡತುಂಬಲೆ 2


ನಿನ್ನ ನೋಡದ ನಯನಕ್ಕೆ ಮಣ್ಣನೆ ತುಂಬಲೆ

ನರಸಿಂಗನ ಸ್ಮರಿಸದ

ಮನವನು ಏನು ಮಾಡಲೊ ವಿಜಯ ರಾಮಚಂದ್ರವಿಠಲ 3

***


No comments:

Post a Comment